ಗುರಿ ತಲುಪಲು ಬೇಕು ಗುರು

Ull_yuvavahini
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ವ್ಯಕ್ತಿ ಉನ್ನತ ಹುದ್ದೆ, ಸ್ಥಾನಕ್ಕೆ ತಲುಪಲು ಶಿಕ್ಷಕರ ಶ್ರಮ ಅಗತ್ಯ. ಯಾವುದೇ ಗುರಿ ತಲುಪಬೇಕಾದರೆ ಗುರುವಿನ ಮಾರ್ಗದರ್ಶನ ಮುಖ್ಯ ಎಂದು ನಿವೃತ್ತ ಶಿಕ್ಷಕ ಗಂಗಾಧರ ಪೂಜಾರಿ ಸುದರ್ಶನ ನಗರ ಹೇಳಿದರು.

ಕೊಣಾಜೆ ಗ್ರಾಮಚಾವಡಿಯ ಯುವವಾಹಿನಿ ವತಿಯಿಂದ ಗುರುವಾರ ಗ್ರಾಮಚಾವಡಿಯಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊಣಾಜೆ- ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂದ ಅಧ್ಯಕ್ಷ ರವೀಂದ್ರ ಬಂಗೇರ ಕೊಣಾಜೆ ಮಾತನಾಡಿ, ಗ್ರಾಮಚಾವಡಿಯಲ್ಲಿ ಸಂ ಆರಂಭಗೊಳ್ಳುವುದರ ಹಿಂದೆ ಶಿಕ್ಷಕರ ಶ್ರಮ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಸಂ ಗುರುಗಳನ್ನು ಸದಾ ಸ್ಮರಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಹಣದ ಹಿಂದೆ ಹೋಗದೆ ಮಕ್ಕಳನ್ನು ಶಿಕ್ಷಕರಾಗುವಂತೆ ಪ್ರೇರೇಪಿಸಬೇಕು ಎಂದರು.

ಈ ಸಂದರ್ಭ ಶಿಕ್ಷಕರಾದ ಸುನೀತಾ, ಸುರೇಖಾ ಹರೀಶ್​ ಪೂಜಾರಿ, ಅನಿತಾ ಜಯಂತ್​, ಡಾ.ಸಂಜಿತ್​ ಎಸ್​.ಅಂಚನ್​, ಸೌಮ್ಯಾ, ದಯಾವತಿ, ರೋಹಿತ್​ ಪೂಜಾರಿ, ಗುರುರಾಜ್​ ಪರಂಡೆ ಅವರನ್ನು ಅಭಿನಂದಿಸಲಾಯಿತು.

ಕೊಣಾಜೆ- ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಷ್​ ಧರ್ಮನಗರ, ಯುವವಾಹಿನಿ ಕೇಂದ್ರ ಸಮಿತಿಯ ಸಂಟನಾ ಕಾರ್ಯದರ್ಶಿ ಸುಂದರ ಸುವರ್ಣ, ಮಂಗಳೂರು ಘಟಕ ಅಧ್ಯಕ್ಷ ನಾಗೇಶ್​ ಅಮೀನ್​ ಮುಳ್ಳಕಾಡು, ಸಮಾಜ ಸೇವಾ ನಿರ್ದೇಶಕಿ ಬಬಿತಾ ಯಾದವ್​ ಮುಖ್ಯ ಅತಿಥಿಗಳಾಗಿದ್ದರು. ಬಬಿತಾ ಬಾಣಬೆಟ್ಟು ಸ್ವಾಗತಿಸಿದರು. ಸುರೇಶ್​ ಪೂಜಾರಿ ವಂದಿಸಿದರು. ಅಜಿತ್​ ಪೂಜಾರಿ ಮತ್ತು ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net