ಪ್ರೀತಿ, ವಿಶ್ವಾಸಕ್ಕೆ ಬಾರದಿರಲಿ ಧಕ್ಕೆ

Ull_Id-milad
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪ್ರವಾದಿ(ಸ) ಅವರು ಶಾಂತಿ, ಸಹನೆ, ದಯೆ, ಮಾನವೀಯತೆ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಈ ನಿಟ್ಟಿನಲ್ಲಿ ನಾವು ಪರಸ್ಪರ ಸಹಕಾರದ ಮೂಲಕ ಎಲ್ಲರೊಂದಿಗೆ ಶಾಂತಿ, ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿ ಜೀವಿಸಬೇಕು ಎಂದು ಪಜೀರ್​ ಗ್ರಾಮ ಪಂಚಾಯಿತಿ ಅಧ್ಯಕ್ಷ ರಫೀಕ್​ ಪಜೀರ್​ ಹೇಳಿದರು.

ಪಜೀರ್​ ರಹ್ಮಾನಿಯಾ ಜುಮಾ ಮಸೀದಿ ಮತ್ತು ಜಂ-ಇಯ್ಯತುತ್ತಲಬಾ ಫ್ರೆಂಡ್ಸ್​ ಅಸೋಸಿಯೇಷನ್​ ಆಶ್ರಯದಲ್ಲಿ ಈದ್​ ಮಿಲಾದ್​ ಪ್ರಯುಕ್ತ ಪಜೀರ್​ ಮಸೀದಿ ವಠಾರದಲ್ಲಿ ಆಯೋಜಿಸಲಾಗಿದ್ದ ಹಿದಾಯತುಲ್​ ಇಸ್ಲಾಮ್​ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಸೀದಿಯ ಖತೀಬ್​ ಇಬ್ರಾಹಿಮ್​ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷ ಅಬ್ದುಲ್​ ಹಮೀದ್​, ಉಪಾಧ್ಯಕ್ಷ ಮೊಯಿದಿನ್​ ಕುಂಞಿ, ಮಾಜಿ ಅಧ್ಯಕ್ಷ ಪಿ.ಮೊಹಮ್ಮದ್​, ಕಾರ್ಯದರ್ಶಿ ಅಬೂಬಕರ್​, ಕೋಶಾಧಿಕಾರಿ ಅಬ್ದುಲ್​ ಖಾದರ್​, ಜತೆ ಕಾರ್ಯದರ್ಶಿ ಬಶೀರ್​, ಕಮಿಟಿ ಸದಸ್ಯರಾದ ಇಬ್ರಾಹಿಮ್​ ಪಾಡಿ, ಮೊಹಮ್ಮದ್​ ಖಾನ್​, ಸಿ.ಎಚ್​.ಲತೀಫ್​, ಉಸ್ತಾದ್​ ಅಬ್ದುಲ್​ ಖಾದರ್​ ಮುಡಿಪು, ಬಾಶಿತ್​ ಝುಹ್ರಿ ಉಸ್ತಾದ್​, ಚೆನೈಕೋಡಿ ಮಸೀದಿಯ ಖತೀಬ್​ ನವಾಝ್​ ಯಮಾನಿ, ಸಿ.ಎಚ್​.ಅಬ್ದುರ್ರಹ್ಮಾನ್​, ಸಾದಿಕ್​ ಮುಸ್ಲಿಯಾರ್​, ಜಂ- ಇಯ್ಯತುತ್ತಲಬಾ ಫ್ರೆಂಡ್ಸ್​ ಅಸೋಸಿಯೇಷನ್​ ಅಧ್ಯಕ್ಷ ನಾಸೀರ್​ ಬಳಕ, ಕಾರ್ಯದರ್ಶಿ ಹಸನ್​ ಕುಂಞಇ ಮೊದಲಾದವರು ಉಪಸ್ಥಿತರಿದ್ದರು.

ಸದರ್​ ಮುಅಲ್ಲಿಮ್​ ಅಬ್ದುಲ್​ ಖಾದರ್​ ಉಸ್ತಾದ್​ ಸ್ವಾಗತಿಸಿದರು. ಅಬ್ದುಲ್​ ಹಮೀದ್​ ಸನ್ಮಾನ ಪತ್ರ ವಾಚಿಸಿದರು. ಸಮೀರ್​ ಪಜೀರ್​ ವಂದಿಸಿದರು. ವಿದ್ಯಾರ್ಥಿಗಳಾದ ಸಫೀಲ್​ ಮುದಸ್ಸಿರ್​ ಹನೀಫ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net