‘ಗುಲಾಬೋ ಸೀತಾಬೋ’ದಲ್ಲಿ ಗುಲಾಬೋ ಯಾರು? ಸೀತಾಬೋ ಯಾರು?

Gulabo Sitabo Final
Published on

ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ಅಭಿನಯದ ‘ಗುಲಾಬೋ ಸೀತಾಬೋ’ ಚಿತ್ರವು ಚಿತ್ರಮಂದಿರಗಳಿಗಿಂಥ ಮುಂಚೆ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಚಿತ್ರ ಬಿಡುಗಡೆಯಾಗುವುದು ಜೂನ್ 12ರಂದು. ಆದರೆ, ಈಗಿನಿಂದಲೇ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲಗಳಿವೆ.

ಪ್ರಮುಖವಾಗಿ ಈ ಚಿತ್ರದಲ್ಲಿ ಗುಲಾಬೋ ಯಾರು, ಸೀತಾಬೋ ಯಾರು ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿದೆ. ಗುಲಾಬೋ ಪಾತ್ರವನ್ನು ಅಮಿತಾಭ್ ಮಾಡಿದರೆ, ಸೀತಾಬೋ ಪಾತ್ರವನ್ನು ಆಯುಷ್ಮಾನ್ ಖುರಾನಾ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಅದು ಅದಲಿ-ಬದಲಿ ಆಗುವ ಸಾಧ್ಯತೆಯೂ ಇರಬಹುದು ಎಂದು ಅಂದಾಜಿಸಲಾಗಿದೆ.

ಈ ಮಧ್ಯೆ, ಚಿತ್ರದ ಪ್ರೋಮೋ ಒಂದು ಬಿಡುಗಡೆಯಾಗಿದೆ. ಇದರ ಪ್ರಕಾರ, ಗುಲಾಬೋ ಮತ್ತು ಸೀತಾಬೋ ಮನುಷ್ಯರಲ್ಲ, ಮೇಕೆಗಳು. ಆಶ್ಚಯರ್ವಾಗಬಹುದು. ಆದರೂ ಇದು ನಿಜ. ‘ಗುಲಾಬೋ ಸೀತಾಬೋ’ ಎನ್ನುವುದು ಮೇಕೆಗಳ ಹೆಸರಂತೆ. ಈ ಪ್ರೋಮೋದಲ್ಲಿ ಆ ಎರಡೂ ಮೇಕೆಗಳನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ ಎನ್ನುವುದು ವಿಶೇಷ.

ಇನ್ನು ಚಿತ್ರದ ಕಥೆ ಏನಿರಬಹುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಆದರೆ, ನಿರ್ದೇಶಕ ಶೂಜಿತ್ ಸರ್ಕಾರ್ ಆಗಲೀ, ಚಿತ್ರತಂಡದವರಾಗಲೀ ... ಕಥೆಯನ್ನೂ ಎಲ್ಲೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಲೇ ಇದೆ. ಚಿತ್ರಕ್ಕೆ ಜೂಹೀ ಚತುರ್ವೇದಿ ಕಥೆ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net