More

  ರಾಹುಲ್​ ತೆವಾಟಿಯಾ ಹೊಸ ಲುಕ್​ಗೆ ಕ್ರಿಕೆಟ್​ ಪ್ರೇಮಿಗಳು ಫಿದಾ!

  ನವದೆಹಲಿ: ಐಪಿಎಲ್​ನಲ್ಲಿ ಸಿಕ್ಸರ್​ ಕಿಂಗ್​ ಆಗಿ ಮಿಂಚಿರುವ ಸ್ಫೋಟಕ ಬ್ಯಾಟರ್​ ರಾಹುಲ್​ ತೆವಾಟಿಯಾ ಹಾಲಿ ದೇಶೀಯ ಕ್ರಿಕೆಟ್​ ಋತುವಿನಲ್ಲಿ ರಣಜಿ ಟ್ರೋಫಿಯಲ್ಲಿ ಹರಿಯಾಣ ತಂಡದ ಪರ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನಸೆಳೆದಿದ್ದಾರೆ.

  ರಾಹುಲ್​ ತೆವಾಟಿಯಾ ಅವರ ರೆಟ್ರೋ ಲುಕ್​ಗೆ ಕ್ರಿಕೆಟ್​ ಪ್ರೇಮಿಗಳು ಫಿದಾ ಆಗಿದ್ದು, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್​ ಮಿಯಾಂದಾದ್​ ಮತ್ತು ಭಾರತದ ಮಾಜಿ ಆಲ್ರೌಂಡರ್​ ಮನೋಜ್​ ಪ್ರಭಾಕರ್​ರನ್ನು ನೆನೆಸಿಕೊಂಡಿದ್ದಾರೆ.

  ತೆವಾಟಿಯಾ ಅವರ ಮೀಸೆಯ ಲುಕ್​ನ ಚಿತ್ರವನ್ನು ಹರಿಯಾಣ ಕ್ರಿಕೆಟ್​ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಬೆನ್ನಲ್ಲೇ ವೈರಲ್​ ಆಗಿದೆ. ಜಾರ್ಖಂಡ್​ ವಿರುದ್ಧದ ಈ ಪಂದ್ಯದಲ್ಲಿ ತೆವಾಟಿಯಾ 212 ಎಸೆತಗಳಲ್ಲಿ 144 ರನ್​ ಸಿಡಿಸಿ ಬ್ಯಾಟಿಂಗ್​ನಲ್ಲೂ ಮಿಂಚಿದ್ದಾರೆ.

  ರಾಹುಲ್​ ತೆವಾಟಿಯಾ 80-90ರ ದಶಕದ ಕ್ರಿಕೆಟಿಗರನ್ನು ನೆನಪಿಸಿದ್ದಾರೆ ಎಂದು ಕೆಲವರು ಹೇಳಿದ್ದರೆ, ಜಾವೇದ್​ ಮಿಯಾಂದಾದ್​ರ ಬಯೋಪಿಕ್​ನಲ್ಲಿ ತೆವಾಟಿಯಾ ನಟಿಸುತ್ತಿರುವಂತಿದೆ ಎಂದು ಇನ್ನು ಕೆಲವರು ಟ್ರೋಲ್​ ಮಾಡಿದ್ದಾರೆ. ಐಪಿಎಲ್​ನಲ್ಲಿ ಈ ಮುನ್ನ ರಾಜಸ್ಥಾನ ರಾಯಲ್ಸ್​ ತಂಡದಲ್ಲಿದ್ದ ತೆವಾಟಿಯಾ ಸದ್ಯ ಗುಜರಾತ್​ ಟೈಟಾನ್ಸ್​ ತಂಡದಲ್ಲಿದ್ದಾರೆ.

  ದಕ್ಷಿಣ ಆಫ್ರಿಕಾದಲ್ಲಿ ಸನ್​ರೈಸರ್ಸ್​ ಶೈನಿಂಗ್​; ಕಾವ್ಯಾ ಮಿಂಚಿಂಗ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts