ಗುಜರಾತ್​​-ರಾಜಸ್ಥಾನ ಗಡಿಯಲ್ಲಿನ ಈ ಜಿಲ್ಲೆಗೆ 2015ರಲ್ಲೇ ಕಾಲಿಟ್ಟಿದೆ ಕರೊನಾ...!

Coronavirus 9 may 20
Published on

ಇಡೀ ವಿಶ್ವ ಕರೊನಾ ಭಯದಲ್ಲಿ ಬದುಕುತ್ತಿದೆ. ಎಲ್ಲೇ ನೋಡಿದರೂ ಕರೊನಾದ್ದೇ ಸುದ್ದಿ, ಮಾತು. ಜನರಂತೂ ಕರೊನಾ ಎಂದರೆ ಸಾಕು ಆತಂಕ ಪಡುತ್ತಿದ್ದಾರೆ. ಒಂದೆಡೆ ರೋಗ ಭಯ. ಇನ್ನೊಂದೆಡೆ ಹೊಟ್ಟೆಬಟ್ಟೆಗಿಲ್ಲದೆ ಪರದಾಡುವ ಪರಿಸ್ಥಿತಿ. ಒಟ್ಟಿನಲ್ಲಿ ಭಾರತವೂ ಸೇರಿ ಅನೇಕ ದೇಶಗಳ ಅರ್ಥ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆಗಳನ್ನೆಲ್ಲ ಬುಡಮೇಲು ಮಾಡಿದೆ ಕೊವಿಡ್​-19 ಎಂಬ ಬೂತ...!

ವೈರಸ್​ ಬರೋದಕ್ಕಿಂತ ಮೊದಲು ಅದೆಷ್ಟೋ ಜನರು ಕರೊನಾ ಎಂಬ ಹೆಸರನ್ನೇ ಕೇಳಿರಲಿಲ್ಲ. ಈ ಸೋಂಕು ಇಷ್ಟೊಂದು ಅವಾಂತರಗಳನ್ನು ಸೃಷ್ಟಿಸುತ್ತದೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ ಗುಜರಾತ್​ನ ಬನಸ್ಕಂತ ಜಿಲ್ಲೆಯ ಜನರಿಗೆ ಕರೊನಾ ಚಿರಪರಿಚಿತ. ಆ ಜಿಲ್ಲೆಗೆ ಕರೊನಾ 2015ರಲ್ಲೇ ಕಾಲಿಟ್ಟಿದೆ.

ನಿಜ..ಗುಜರಾತ್​-ರಾಜಸ್ಥಾನ ಗಡಿಯ ಜನರಿಗೆ ಕರೊನಾ ಎಂಬ ಹೆಸರು ಹೊಸದಲ್ಲ. ಅಲ್ಲಿಗೆ 2015ರಲ್ಲೇ ಕಾಲಿಟ್ಟಿದೆ. ಹಾಗಂತ ಕರೊನಾ ವೈರಸ್​ ಆಗಲೇ ಗುಜರಾತ್​ಗೆ ಹೇಗೆ ಬಂತು? ಎಂದು ನೀವು ಶಾಕ್​ ಆಗಬೇಡಿ..ಮುಂದೆ ಓದಿ..ಕತೆ ಬೇರೆ ಇದೆ.

ಗುಜರಾತ್​-ರಾಜಸ್ಥಾನ ಗಡಿ ಭಾಗದಲ್ಲಿರುವ ಬನಸ್ಕಂತ ಎಂಬ ಜಿಲ್ಲೆಯಲ್ಲಿ ದೊಡ್ಡದೊಂದು ಹೋಟೆಲ್​ ಇದೆ. 2015ರಲ್ಲಿ ನಿರ್ಮಾಣ ಮಾಡಲಾಗಿದ್ದು, ಅದರ ಹೆಸರು 'ಹೋಟೆಲ್​ ಕರೊನಾ'.

ಇದೊಂದು ಗೆಸ್ಟ್​ಹೌಸ್​ ಒಳಗೊಂಡ ದೊಡ್ಡ ಹೋಟೆಲ್​. ನಾಲ್ಕು ವರ್ಷದಿಂದಲೂ ಇದೆ. ಸದ್ಯ ಲಾಕ್​ಡೌನ್​ ಆಗಿದ್ದರಿಂದ ಹೋಟೆಲ್​ ಕರೊನಾ ಕೂಡ ಬಂದ್​ ಆಗಿದೆ.

ವೈರಸ್​ ಬರೋವರೆಗೂ ಕರೊನಾ ಎನ್ನುವುದು ಅಷ್ಟು ಪ್ರಚಲಿತ ಹೆಸರು ಆಗಿರಲಿಲ್ಲ. ಹಾಗಾಗಿ ಜನರು ಈ ಹೋಟೆಲ್​ಗೆ ತಮ್ಮ ಹಸಿವು ನೀಗಿಸಿಕೊಳ್ಳಲು, ಪ್ರವಾಸಿಗರು ಉಳಿದುಕೊಳ್ಳಲಷ್ಟೇ ಬರುತ್ತಿದ್ದರು. ಆದರೆ ಈಗ ಹೋಟೆಲ್​ ಕ್ಲೋಸ್​ ಆಗಿದ್ದರೂ, ಅದನ್ನು ನೋಡಲು ಅಲ್ಲಿಗೆ ಬರುತ್ತಿದ್ದಾರೆ. ಕೆಲವರಂತೂ ಫೋಟೋ ತೆಗೆದುಕೊಂಡು ಹೋಗಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

ಉತ್ತರ ಗುಜರಾತ್​​ನ ಸಿದ್ಧಪುರ ಎಂಬಲ್ಲಿಯ ಬರ್ಕಾತ್ ಭಾಯ್ ಎಂಬುವರು ಇದನ್ನು ಪ್ರಾರಂಭಿಸಿದ್ದಾರೆ. ಹೋಟೆಲ್​ ನಿರ್ಮಾಣವಾದಾಗ ಹೆಸರು ಹುಡುಕುತ್ತಿದ್ದೆ. ಆಗ ಕರೊನಾ ಎಂಬ ಹೆಸರು ಥಟ್ಟನೆ ಹೊಳೆಯಿತು. ಉರ್ದುವಿನಲ್ಲಿ ಇದರ ಅರ್ಥ ಗೆಲ್ಯಾಕ್ಸಿ ಎಂದು. ಹಾಗಾಗಿ ಅದನ್ನೇ ಇಟ್ಟೆ ಎಂದು ಬರ್ಕಾತ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net