More

    PHOTOS: ಕರೊನಾ ವೈರಸ್ ಇದ್ರೆ ಕೂಡ್ಲೇ ತಿಳಿಸುತ್ತಂತೆ ಈ ಸ್ಮೆಲ್ ಕ್ಯಾಮೆರಾ…!

    ಪ್ಯಾರಿಸ್​: ಕರೊನಾ ವೈರಸ್ ಜಗತ್ತನೇ ತಲ್ಲಣಗೊಳಿಸಿರುವ ಈ ಸಂದರ್ಭದಲ್ಲಿ ಆ ವೈರಾಣುವಿನ ಇರುವಿಕೆಯನ್ನು ಪತ್ತೆ ಹಚ್ಚುವುದು ಹೇಗೆ ಎಂಬುದು ಯಕ್ಷಪ್ರಶ್ನೆಯೇ ಆಗಿ ಉಳಿದಿದೆ. ಆದಾಗ್ಯೂ,  COVID19 ವೈರಸ್ ಏನಾದರೂ ಗಾಳಿಯಲ್ಲಿ ಇದ್ದರೆ ಅದನ್ನು “ಸ್ಮೆಲ್ ಕ್ಯಾಮೆರಾ” ಪತ್ತೆ ಹಚ್ಚಲಿದೆ ಎಂಬ ಸುದ್ದಿಯೊಂದು ಜಗತ್ತಿನ ಗಮನಸೆಳೆದಿದೆ. ಈ ಸ್ಮೆಲ್ ಕ್ಯಾಮೆರಾವನ್ನು ಏರ್​ಬಸ್​ ಬಳಕೆ ಮಾಡಲಿದ್ದು, ಫಲಿತಾಂಶ ಏನೆಂಬ ಕುತೂಹಲ ಈಗ ಹುಟ್ಟಿಕೊಂಡಿದೆ!

    ಇದನ್ನೂ ಓದಿ: ಒಂದು ಹಾವು ಕಚ್ಚಿದ್ರೂ ಬಚಾವ್​, ಆದ್ರೆ ಮತ್ತೊಂದು ಬೆಡ್​ರೂಮ್​ಗೇ ನುಗ್ಗಿತ್ತು..

    ಅಲ್ಟ್ರಾ ಸೆನ್ಸೆಟಿವ್ ಸೆನ್ಸರ್​ಗಳನ್ನು ಹೊಂದಿದ ಸ್ಮೆಲ್​ ಕ್ಯಾಮೆರಾವನ್ನು 2017ರಲ್ಲಿ ಮೊದಲ ಬಾರಿ ಅಭಿವೃದ್ಧಿಪಡಿಸಲಾಗಿದ್ದು, ಅವುಗಳನ್ನು ಸ್ಫೋಟಕಗಳ ಪತ್ತೆಗೆ ಬಳಸಲಾಗುತ್ತಿತ್ತು. ಈಗ ಹೊಸ ಸನ್ನಿವೇಶ ಮತ್ತು ಅಗತ್ಯಕ್ಕೆ ತಕ್ಕಂತೆ ಆ ಕ್ಯಾಮೆರಾದಲ್ಲಿ ಬದಲಾವಣೆ ತರಲಾಗಿದ್ದು, ಜೈವಿಕ ಕೋಶಗಳನ್ನು ಅಳವಡಿಸಿದ್ದು ಅದು ಗಾಳಿಯಲ್ಲಿ ತೇಲಾಡುವ ರಾಸಾಯನಿಕಗಳು ಮತ್ತು ಸೂಕ್ಷ್ಮಾಣು ಜೀವಿಗಳನ್ನು ಗುರುತಿಸಿ ಎಚ್ಚರಿಸುತ್ತದೆ.

    ಇದನ್ನೂ ಓದಿ: ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!

    ಇಂತಹ ಟೆಕ್ನಾಲಜಿಯನ್ನು ಈಗಾಗಲೇ ಕ್ಯಾನ್ಸರ್​ ಮತ್ತು ಇನ್​​ಫ್ಲುಯೆನ್ಜಾ ಮುಂತಾದವುಗಳ ಪತ್ತೆಗೆ ಬಳಸಲಾಗುತ್ತಿದೆ. ಇದನ್ನೇ ಈಗ SARS-Cov-2, COVID19 ವೈರಸ್​ಗಳ ಪತ್ತೆಗೂ ಬಳಸಲು ತೀರ್ಮಾನಿಸಲಾಗಿದೆ. ಕ್ಯಾಲಿಫೋರ್ನಿಯಾ ಮೂಲದ ಕೊನಿಕೂ ಈ ಸಂಬಂಧ ಏರ್​ಬಸ್​ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಏರ್​ಬಸ್​ ಇದರ ಮೊದಲ ಬಳಕೆದಾರ. ಕೊನಿಕೂ ಸಿಇಒ ಮತ್ತು ಸಂಸ್ಥಾಪಕ ಓಶ್ ಅಗಾಬಿ ಇದರ ಕುರಿತು ಬ್ಲಾಗ್ ಬರೆದುಕೊಂಡಿದ್ದು, ಅದರಲ್ಲಿ ಕರೊನಾ ವೈರಸ್​ ಪತ್ತೆಗಾಗಿ ಸ್ಮೆಲ್ ಕ್ಯಾಮೆರಾ ಬಳಸುವ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಬೆಳವಣಿಗೆ ಉದ್ಯಮ ಕ್ಷೇತ್ರದಲ್ಲಿ ಹೊಸ ಆಶಾಕಿರಣವನ್ನು ಹೊಮ್ಮಿಸಿದೆ. (ಏಜೆನ್ಸೀಸ್​)

    VIDEO: ದಯವಿಟ್ಟು ನಮ್ಮನ್ನು ಕರೆಸಿಕೊಳ್ಳಿ: ಮುಂಬೈನಲ್ಲಿ ಸಿಲುಕಿರುವ ಕನ್ನಡತಿ ಅಳಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts