More

    ಚಿಕ್ಕ ವಯಸ್ಸಲ್ಲಿ ರೈತನ ವೇಷ ಧರಿಸಿದ್ದ ಈ ಹುಡುಗ ಯಾರು, ಹೇಳಬಲ್ಲಿರಾ?

    ನವದೆಹಲಿ: ರೈತನ ವೇಷ ಧರಿಸಿದ 6 ವರ್ಷದ ಈ ಹುಡುಗ ಯಾರು ಹೇಳಬಲ್ಲಿರಾ? ದೊಡ್ಡವನಾದ ಮೇಲೆ ಈತ ಸೂಪರ್​ ಮಾಡೆಲ್​ ಹಾಗೂ ಬಾಲಿವುಡ್​ ನಟನಾಗಿದ್ದಾನೆ. ಗೊತ್ತಾಯಿತಾ? ಇದು ಭಾರತದ ಪ್ರಸಿದ್ಧ ರೂಪದರ್ಶಿ ಮತ್ತು ಫಿಟ್​ನೆಸ್​ ಐಕಾನ್​​ ಮಿಲಿಂದ್​ ಸೋಮನ್.

    ಆಗಾಗ್ಗೆ ಥ್ರೋಬ್ಯಾಕ್​ ಪಿಚ್ಚರ್​ಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡುವ ಹವ್ಯಾಸವಿರುವ ಸೋಮನ್​​, ಇದೀಗ, ತಮಗೆ 6 ವರ್ಷವಾಗಿದ್ದಾಗ ರೈತನ ವೇಷ ತೊಟ್ಟು ತೆಗೆಸಿಕೊಂಡಿದ್ದ ಹಳೆಯ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ. ಇದರೊಂದಿಗೆ, ತೋಟವೊಂದರಲ್ಲಿ ದೊಡ್ಡ ಸಿಹಿಗುಂಬಳಕಾಯಿಯನ್ನು ಹಿಡಿದು ಆಡುತ್ತಿರುವ ತಮ್ಮ ಈಗಿನ ವಿಡಿಯೋವನ್ನೂ ಶೇರ್​ ಮಾಡಿದ್ದಾರೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Milind Usha Soman (@milindrunning)

    ಈ ಪೋಸ್ಟ್​ಗೆ “6 ವರ್ಷವಾಗಿದ್ದಾಗ ಕೃಷಿಕನಾಗಬಯಸಿದ್ದೆ, ಈಗ 50 ವರ್ಷಗಳ ನಂತರ ಕೃಷಿಕನಾಗಿದ್ದೀನಿ” ಎಂದು ಟಿಪ್ಪಣಿ ಬರೆದಿರುವ ಮಿಲಿಂದ್​ ಸೋಮನ್, “ತರಕಾರಿಗಳಿಗೆ ಕೃತಕ ಬಣ್ಣ ಹಾಕುತ್ತಾರೆ ಮತ್ತು ಹಣ್ಣುಗಳಿಗೆ ಇಂಜೆಕ್ಷನ್​ ನೀಡುತ್ತಾರೆ ಎಂದೆಲ್ಲಾ ಕೇಳುತ್ತಿದ್ದೇವೆ. ಆದ್ದರಿಂದ ನಿಮ್ಮದೇ ಬೆಳೆದುಕೊಂಡರೆ ಅತ್ಯುತ್ತಮ ಅಥವಾ ಸ್ನೇಹಿತರೊಂದಿಗೆ ಕೂಡಿಕೊಂಡು (ಕೃಷಿ) ಮಾಡಿ. ನಿಮ್ಮ ಬೇರುಗಳಿಗೆ ಹಿಂತಿರುಗಿ” ಎಂದು ಸಲಹೆ ನೀಡಿದ್ದಾರೆ. ತಮ್ಮ ಈ ಪೋಸ್ಟ್​ಗೆ ಹೆಲ್ತ್​ ಎಂಬ ಹ್ಯಾಶ್​ಟ್ಯಾಗ್​ ಕೂಡ ಹಾಕಿದ್ದಾರೆ.(ಏಜೆನ್ಸೀಸ್)

    ರಾಂಪ್​ ವಾಕ್​ ಮಾಡಿ ಗಮನ ಸೆಳೆದ ಕರೀನಾ; ‘ನನ್ನ ಆಯ್ಕೆಗೆ ಬಿಟ್ಟಿದ್ದರೆ, ಕಫ್ತಾನ್ ತೊಟ್ಟಿರುತ್ತಿದ್ದೆ’ ಎಂದರು!

    ಪಾನ್​ ಮಸಾಲ ಜಾಹೀರಾತಿನ ಹಣ ಹಿಂತಿರುಗಿಸಿದ ಅಮಿತಾಭ್​ ಬಚ್ಚನ್​!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts