

ಗುರುಪುರ: ಕಾಟಿಪಳ್ಳ 3ನೇ ವಾರ್ಡ್ನಲ್ಲಿ 1 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ಎರಡು ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟಿಸಿದರು.
ಕಾಟಿಪಳ್ಳ 3ನೇ ವಾರ್ಡ್ನ 2ನೇ ಬ್ಲಾಕ್ನಲ್ಲಿ ಓಕುಳಿಕಟ್ಟೆ ಬಳಿ ಕಿರುಸೇತುವೆ ಮತ್ತು ಶಾಲೆ ಬಳಿಯ ಕೊಳವೆಬಾವಿಯನ್ನು ಶಾಸಕರು ಉದ್ಘಾಟಿಸಿದರು. ಬಳಿಕ ಶಿಶುಮಂದಿರಕ್ಕೆ ಹೋಗುವ ರಸ್ತೆ ಕಾಂಕ್ರೀಟ್, ಅಮನ್ ಲೇಔಟ್ ರಸ್ತೆ ಕಾಮಗಾರಿ, 3ನೇ ವಾರ್ಡ್ನ ಎಲ್ಲ ರಸ್ತೆಗಳಿಗೆ ನಾಮಫಲಕ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.
ಮೇಯರ್ ಮನೋಜ್ ಕುವಾರ್, ಕಾರ್ಪೋರೇಟರ್ಗಳಾದ ಲೋಕೇಶ್ ಬೊಳ್ಳಾಜೆ, ಸರಿತಾ ಎಸ್., ವರುಣ್ ಚೌಟ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ದಿನಕರ ಇಡ್ಯಾ, ಮಂಗಳೂರು ಉತ್ತರ ಮಂಡಲ ಎಸ್ಸಿ ಮೋರ್ಚಾದ ಅಧ್ಯಕ್ಷ ಹರೀಶ್ ಪಣಂಬೂರು, ವಾರ್ಡ್ ಅಧ್ಯಕ್ಷ ಶಾಂತಕುವಾರ್, ಪ್ರಮುಖರಾದ ಸ್ವಪ್ನಾ ಎಸ್., ಹೊನ್ನಯ್ಯ ಕೋಟ್ಯಾನ್, ಆರತಿ, ವಾಧವ ಕುಲಾಲ್, ನವೀನ್, ಲೋಕೇಶ್, ಪಲ್ಲವಿ ಮತ್ತಿತರರು ಉಪಸ್ಥಿತರಿದ್ದರು.