

ಕಡಬ: ಕಾಣಿಯೂರು ಗ್ರಾಮದ ಏಲಡ್ಕ-ಬಂಡಾಜೆ-ನಾವೂರು ಸಂಪರ್ಕ ರಸ್ತೆಯ ಗ್ರಾ.ಪಂ. ಅನುದಾನದ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿ ಪೂಜೆ ಇತ್ತೀಚೆಗೆ ನಡೆಸಲಾಯಿತು.
ಕಾಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ಕೊಪ್ಪ ಗುದ್ದಲಿ ಪೂಜೆ ನೆರವೇರಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಗಣೇಶ್ ಉದನಡ್ಕ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ನಿರ್ದೇಶಕರಾದ ರಾಜೇಶ್ ಮೀಜೆ, ಸುಂದರ ಬೆದ್ರಾಜೆ, ಕಾಣಿಯೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಮುಗರಂಜ, ಕಾರ್ಯದರ್ಶಿ ಉಮೇಶ್ ಬೀರುಕುಡಿಕೆ, ಪುನೀತ್ ಬಂಡಾಜೆ, ಸುರೇಶ್ ಬಂಡಾಜೆ, ಶಿವಪ್ಪ ಬಂಡಾಜೆ, ಶೇಖರ ಗೌಡ ಬಂಡಾಜೆ ಮತ್ತಿತರರು ಉಪಸ್ಥಿತರಿದ್ದರು.