ದೇಗುಲ ಸಂಪರ್ಕ ರಸ್ತೆಗೆ ಗುದ್ದಲಿ ಪೂಜೆ

New Project (6)
Published on

ಸುಳ್ಯ: ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರು ಮಾವಿನಕಟ್ಟೆಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು. ಶಾಸಕರ ಅನುದಾನ ಹತ್ತು ಲಕ್ಷ ರೂ.ನಲ್ಲಿ ನಿರ್ಮಾಣಗೊಳ್ಳಲಿರುವ ಈ ರಸ್ತೆ ಮಾವಿನಕಟ್ಟೆಯಿಂದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಾಲ್ಸೂರಿನ ಬಿಜೆಪಿ ಪ್ರಮುಖರಾದ ಸುಧಾಕರ ಕಾಮತ್ ವಿನೋಬನಗರ, ಜಯರಾಮ ರೈ ಜಾಲ್ಸೂರು, ದಿನೇಶ್ ಅಡ್ಕಾರು, ಮಾಧವ ಗೌಡ ಕಾಳಮನೆ, ಡಾ.ಗೋಪಾಲಕೃಷ್ಣ ಭಟ್ ಕಾಟೂರು, ಐ.ಕೆ.ಶರತ್ ಚಂದ್ರ ಕದಿಕಡ್ಕ, ಹೇಮಂತ್ ಮಠ, ಜಯರಾಜ್ ಕುಕ್ಕೇಟಿ, ಅಶೋಕ ಅಡ್ಕಾರು, ವೆಂಕಟೇಶ್ ನಡುಬೆಟ್ಟು, ಭಾಸ್ಕರ ಅಡ್ಕಾರು, ಗಣೇಶ್ ರೈ ಕುಕ್ಕಂದೂರು, ರವಿರಾಜ್ ಗಬ್ಬಲಡ್ಕ, ಗ್ರಾ.ಪಂ. ಸದಸ್ಯರಾದ ಲೀಲಾವತಿ ವಿನೋಬನಗರ, ಸಾವಿತ್ರಿ ಅಡ್ಕಾರು ಬೈಲು, ವಿಜಯ ಅಡ್ಕಾರು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net