

RCB vs GT: ಇಂದು (ಏ.02) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಜಿಟಿ ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟಿಂಗ್ ಇಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಗೆ ಆರಂಭಿಕ ಹಂತದಲ್ಲೇ ದೊಡ್ಡ ಆಘಾತ ಎದುರಾಯಿತು.
20 ಓವರ್ ಅಂತ್ಯಕ್ಕೆ ಆರ್ಸಿಬಿ 169 ರನ್ಗಳನ್ನು ಕಲೆಹಾಕಿತು. 170 ರನ್ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ಗೆ ಆರಂಭಿಕ ಹಂತದಲ್ಲಿ ಕ್ಯಾಪ್ಟನ್ ಶುಭಮನ್ ಗಿಲ್ ವಿಕೆಟ್ ಪತನಗೊಂಡಿದ್ದು ಬಿಟ್ಟರೆ ಉಳಿದಂತೆ ನೀರು ಕುಡಿದಷ್ಟೇ ಸಲಿಸಲಾಯಿತು.
ಗಿಲ್ ವಿಕೆಟ್ ಹೋಗಿದ್ದೇ ತಡ ಕ್ರೀಸ್ಗೆ ಅಂಟಿ ನಿಂತ ಸಾಯಿ ಸುದರ್ಶನ್ ಮತ್ತು ಜಾಸ್ ಬಟ್ಲರ್, ಆರ್ಸಿಬಿ ಬೌಲರ್ಗಳ ಬೆವರಿಳಿಸುವಲ್ಲಿ ಯಶಸ್ವಿಯಾದರು. ಇವರಿಬ್ಬರ ಉತ್ತಮ ಜೊತೆಯಾಟ ಆರ್ಸಿಬಿ ನೀಡಿದ್ದ ಗುರಿಯನ್ನು ಅತ್ಯಂತ ಸುಲಭವಾಗಿ ತಲುಪಲು ಕಾರಣವಾಯಿತು. ಇನ್ನು ಜಿಟಿ ಪರ ಬೌಲಿಂಗ್ನಲ್ಲಿ ಮಿಂಚಿದ ಮೊಹಮ್ಮದ್ ಸಿರಾಜ್, ಬರೋಬ್ಬರಿ ಮೂರು ವಿಕೆಟ್ ಕಬಳಿಸುವ ಮೂಲಕ ಆರ್ಸಿಬಿ ಬ್ಯಾಟರ್ಗಳಿಗೆ ದುಃಸ್ವಪ್ನದಂತೆ ಕಾಡಿದರು.
ಶುಭಮನ್ ಗಿಲ್- 14 ರನ್, 14 ಎಸೆತ
ಸಾಯಿ ಸುದರ್ಶನ್- 49 ರನ್, 36 ಎಸೆತ
ಜಾಸ್ ಬಟ್ಲರ್- 73 ರನ್, 33 ಎಸೆತ