ಮಾಜಿ ಪ್ರಿಯಕರನನ್ನು ಇನ್ನೊಂದು ಬಾರಿ ತಬ್ಬಿಕೊಳ್ಳಬಹುದೇ?: ವರನನ್ನು ಕೇಳಿದ ವಧುವಿನ ಗತಿ ಏನಾಯ್ತು?

Bride Groom
Published on

ಕೌಲಾಲಂಪುರ: ಕೊನೆಯದಾಗಿ ಒಂದೇ ಒಂದು ಬಾರಿ ಮಾಜಿ ಪ್ರಿಯಕರನನ್ನು ತಬ್ಬಿಕೊಳ್ಳುತ್ತೇನೆಂದು ಮದುವೆ ಮಂಟಪದಲ್ಲೇ ವಧುವೊಬ್ಬಳು ಹೇಳುವ ಮೂಲಕ ತನ್ನ ಪತಿಯನ್ನು ಅಚ್ಚರಿಯ ಜತೆಗೆ ನೋವಿಗೆ ದೂಡಿದ ಘಟನೆ ಮಲೆಷ್ಯಾದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಭಾರಿ ವೈರಲ್​ ಆಗಿದೆ.

ಮಯಾಂಗ್‌ಕುಮಯ್ ಎಂಬ ಮಹಿಳೆ ಟಿಕ್​ಟಾಕ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಈವರೆಗೂ 50 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಅತಿಥಿಗಳಿಗೆ ನವವಧು-ವರರು ಆತಿಥ್ಯ ನೀಡುವಾಗ ವಧು ತನ್ನ ಮಾಜಿ ಬಾಯ್​ಫ್ರೆಂಡ್​ ತಬ್ಬಿಕೊಂಡು ಸತ್ಕರಿಸಿದ್ದಾಳೆ.

ನವವಧು-ವರರಿಗೆ ಅಭಿನಂದನೆ ಸಲ್ಲಿಸಲು ಮಾಜಿ ಬಾಯ್​ಫ್ರೆಂಡ್​ ವೇದಿಕೆ ಮೇಲೆ ಹೋಗುತ್ತಾನೆ. ಆತನಿಗೆ ಶೇಕ್​ ಮಾಡವ ಉದ್ದೇಶ ಮಾತ್ರ ಇರುತ್ತದೆ. ಆದರೆ, ಸುಮ್ಮನೆ ಒಂದು ಕ್ಷಣ ಯೋಚಿಸುವ ವಧು, ವರನತ್ತ ತಿರುಗಿ ಬೆರಳು ತೋರಿಸುತ್ತಾ "ನಾನು ಇನ್ನೂ ಒಂದು ಬಾರಿ ತಬ್ಬಿಕೊಳ್ಳಬಹುದೇ?" ಎನ್ನುತ್ತಾಳೆ.

ಸರಿ ಎಂದು ವರ ತಲೆಯಾಡಿಸುತ್ತಾನೆ. ಆ ಬಳಿಕ ವಧು ಮಾಜಿ ಬಾಯ್​ಫ್ರೆಂಡ್​ ಅನ್ನು ತಬ್ಬಿಕೊಂಡು ಬೆನ್ನು ಸವರಿ ಬೆಚ್ಚನೆಯ ಅಪ್ಪುಗೆ ನೀಡುತ್ತಾಳೆ. ಬಳಿಕ ಮಾಜಿ ಬಾಯ್​ಫ್ರೆಂಡ್​ ವಧುವಿನ ಪತಿಗೆ ಧನ್ಯವಾದ ತಿಳಿಸಲು ಶೇಕ್​ ಹ್ಯಾಂಡ್​ ಕೊಡಲು ಹೋಗುತ್ತಾನೆ. ಆದರೆ, ವರ ಆತನನ್ನು ಎಳೆದು ತಬ್ಬಿಕೊಳ್ಳುತ್ತಾನೆ.

ವಿಡಿಯೋ ಅಪ್​ಲೋಡ್​ ಮಾಡಿದಾಗಿನಿಂದ 4 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದ್ದು, 19 ಸಾವಿರಕ್ಕೂ ಅಧಿಕ ಕಾಮೆಂಟ್ಸ್​ಗಳು ಹರಿದುಬಂದಿವೆ. ವಿಡಿಯೋ ಪ್ರತಿಕ್ರಿಯಿಸಿ ನೆಟ್ಟಿಗರು ಮೇಲ್ನೋಟಕ್ಕೆ ವರ, ವಧುವಿಗೆ ಅವಕಾಶ ನೀಡಿದರೂ ಆತನ ಮುಖದಲ್ಲಿ ನೋವಿನ ಭಾವನೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ. ಮುಖ ಎಂದಿಗೂ ಸುಳ್ಳು ಹೇಳುವುದಿಲ್ಲ ಎಂದು ಕಮೆಂಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net