

ಮುಂಬೈ: ವಧುವಿನ ಅಪ್ಪ ಸೆಕೆಂಡ್ ಹ್ಯಾಂಡ್ ಮಂಚವನ್ನು ನೀಡಿದ್ದಾರೆಂದು ವರ ವಿವಾಹವನ್ನು ನಿರಾಕರಿಸಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಹೈದರಾಬಾದ್ನ ಚಂದ್ರಯ್ಯನಗುಟ್ಟದ ಬಳಿ ಮೊಹಮ್ಮದ್ ಜಕ್ರಿಯಾ ಎಂಬ ವ್ಯಕ್ತಿ ವಿವಾಹ ನಡೆಯುತ್ತಿತ್ತು. ಮದುವೆ ಸಮಯ ಸಮೀಪಿಸುತ್ತಿರುವಾಗ, ವಧುವಿನ ಸಂಬಂಧಿಕರು ತನಗೆ ಸೆಕೆಂಡ್ ಹ್ಯಾಂಡ್ ಮಂಚ, ಹಾಸಿಗೆಯನ್ನು ಕೊಟ್ಟಿದ್ದಾರೆ ಎಂದು ತಿಳಿದ ವರ ಮದುವೆಯಾಗಲು ನಿರಾಕರಿಸಿ ಮಂಟಪದಿಂದ ಹೊರಗೆ ಹೋಗಿದ್ದಾನೆ.
ಈ ವಿಚಾರವಾಗಿ ಬೇಸರಗೊಂಡ ವಧುವಿನ ತಂದೆ ಚಂದ್ರಯ್ಯನಗುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ವರನ ಮನವೋಲಿಸುವ ಕೆಲಸ ಮಾಡಿದ್ದಾರೆ. 'ಇಷ್ಟು ಸಣ್ಣ ವಿಚಾರಕ್ಕೆ ಮದುವೆ ಕ್ಯಾನ್ಸಲ್ ಮಾಡಿದ್ದಾನೆ ಈತನನ್ನು ನಾನು ಮದುವೆಯಾಗಲಾರೆ' ಎಂದು ಹೇಳಿ ವಧು ಟ್ವಿಸ್ಟ್ ಕೊಟ್ಟಿದ್ದಾಳೆ. (ಏಜೆನ್ಸೀಸ್)