ಕೋಡಿತಲೆಯಲ್ಲಿ ಹಸಿರು ಜೀವ ಅಭಿಯಾನ

kota (7)
Published on

ಕೋಟ: ಕೋಡಿಕನ್ಯಾನ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಪಂಚವರ್ಣ ಸಂಟನೆ ಕೋಟ ಸಂಯೋಜನೆಯೊಂದಿಗೆ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ, ಪಂಚಶಕ್ತಿ ಸಂ ಕೋಡಿತಲೆ ಇವರ ಸಹಕಾರದೊಂದಿಗೆ ಹಸಿರು ಜೀವ ಅಭಿಯಾನ ಕಾರ್ಯಕ್ರಮ ಭಾನುವಾರ ನಡೆಯಿತು.

ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಪೂಜಾರಿ ಗಿಡ ನೆಡುವ ಕಾರ್ಯಕ್ರಮ ವಾಡುವದರಿಂದ ಆಗುವ ಅನುಕೂಲತೆಗಳ ಬಗ್ಗೆ ವಾಹಿತಿ ನೀಡಿದರು.

ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರ್ ಮೆಂಡನ್, ಪಂಚಶಕ್ತಿ ಸಂ ಕಾರ್ಯದರ್ಶಿ ಸಂದೀಪ ಖಾರ್ವಿ, ಸದಸ್ಯರಾದ ಅನಿಲ್ ಖಾರ್ವಿ, ವಿಕೇಶ್ ಬಂಗೇರ, ಸಂಜೀವಿನಿ ಸಂ ಎಲ್.ಸಿ.ಆರ್.ಪಿ. ಆಶಾದೇವಿ, ಪಶುಸಖಿ ವಾಲತಿ, ಸ್ಥಳೀಯರಾದ ಪ್ರೀತ, ಜ್ಯೋತಿ, ಭರತ್ ಖಾರ್ವಿ, ಕುವಾರಿ ಸುಚಿತ್ರ ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು.

ಪಂಚಶಕ್ತಿ ಸಂ ಗೌರವಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ ವಂದಿಸಿದರು. ಕೋಡಿತಲೆ ಅಂಗನವಾಡಿ ಕಾರ್ಯಕರ್ತೆ ಕುವಾರಿ ನಿರೋಶ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net