ತಡೆಗೋಡೆ ನಿರ್ಮಾಣಕ್ಕೆ ಅನುದಾನ ಮಂಜೂರು

Published on

ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಳೆಬದಿಯಲ್ಲಿ ಕೃಷಿ ಜಮೀನುಗಳ ಸಂರಕ್ಷಣೆಗೆ ಮತ್ತು ದೇವಸ್ಥಾನದ ಬಳಿ ತಡೆಗೋಡೆ ನಿರ್ಮಾಣ ಮತ್ತು ತಾಲೂಕಿನ ವಿವಿಧ ಕಾಮಗಾರಿಗಳಿಗೆ ಸಣ್ಣ ನೀರಾವರಿ ಇಲಾಖೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಿಫಾರಸ್ಸಿನ ಮೇರೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ಎಸ್ ಭೋಸರಾಜು ಎರಡು ಕೋಟಿ ಹತ್ತು ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ ಎಂದುಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಡಗಕಾರಂದೂರು ಗ್ರಾಮದ ಬೈಲ ಕೊಡಂಗೆ ಬಳಿ ತಡೆಗೋಡೆಗೆ 30 ಲಕ್ಷ ರೂ., ಕುದ್ಯಾಡಿ ಗ್ರಾಮದ ಪದ್ಮಾಂಜಲಿ ಬಳಿ ತಡೆಗೋಡೆಗೆ 25 ಲಕ್ಷ, ಪುತ್ತಿಲ ಗ್ರಾಮದ ಗುತ್ತು ಮನೆ ಬಳಿ ತಡೆಗೋಡೆಗೆ 25 ಲಕ್ಷ ರೂ., ಪುತ್ತಿಲ ಗ್ರಾಮದ ರವಿಪ್ರಭಾ ಮನೆಯ ಬಳಿ ತಡೆಗೋಡೆಗೆ ಕಾಮಗಾರಿ 25 ಲಕ್ಷ ರೂ., ನಾರಾವಿ ಗ್ರಾಮದ ಸೂರ್ಯನಾರಾಯಣ ದೇವಸ್ಥಾನದ ಬಳಿ ತಡೆಗೋಡೆಗೆ 75 ಲಕ್ಷ ರೂ., ನಡ ಪಂಚಾಯಿತಿ ವ್ಯಾಪ್ತಿಯ ಕನ್ಯಾಡಿ ಗ್ರಾಮದ ಮೂಡಬೆಟ್ಟು ಬಾಯ್ತರು ಬಳಿ ತಡೆಗೋಡೆಗೆ 30 ಲಕ್ಷ ರೂ.ಮಂಜೂರು ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net