ಶಾಲೆಗೆ ಧರ್ಮಸ್ಥಳದಿಂದ ಅನುದಾನ

New Project (39)
Published on

ಸುಳ್ಯ: ಕಾಂತಮಂಗಲ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಶೌಚಗೃಹ ನಿರ್ವಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ವಾಡಿದ 75,000 ರೂ. ಅನುದಾನ ಬಿಡುಗಡೆ ಪತ್ರವನ್ನು ಇತ್ತೀಚೆಗೆ ಹಸ್ತಾಂತರಿಸಲಾಯಿತು.

ಕಾಂತಮಂಗಲ ಶಾಲಾ ಆವರಣದಲ್ಲಿ ನಡೆದ ಸವಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಮೀರಾ, ಸ್ಥಳೀಯ ಒಕ್ಕೂಟ ಅಧ್ಯಕ್ಷ ಸತೀಶ್ ಅತ್ಯಡ್ಕ ಯೋಜನಾಧಿಕಾರಿಗಳ ಸ್ಪಂದನೆಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಅಜ್ಜಾವರ ಗ್ರಾ.ಪಂ. ಉಪಾಧ್ಯಕ್ಷ ಜಯರಾಮ ಅತ್ಯಡ್ಕ, ಮುಖ್ಯಶಿಕ್ಷಕಿ ಸ್ವರ್ಣಲತಾ, ತಾಲೂಕು ಯೋಜನಾಧಿಕಾರಿ ವಾಧವ ಗೌಡ, ಎಸ್‌ಡಿಎಂಸಿ ಉಪಾಧ್ಯಕ್ಷ ಜಗದೀಶ್ ದೊಡ್ಡೇರಿ, ಪ್ರಮುಖರಾದ ಪರಮೇಶ್ವರ್ ನಾಯಕ್, ಸುಬ್ಬ ಪಾಟಾಳಿ, ಸರಿತಾ ಬಸವನಪಾದೆ ಮಂಜುಳಾ ಬಡಿಗೇರ್, ಸೇವಾ ಪ್ರತಿನಿಧಿ ಸೌಮ್ಯಾ ಮೊದಲಾದವರಿದ್ದರು. ವಲಯ ಮೇಲ್ವಿಚಾರಕಿ ಕಾಂತಿಕಾಮಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net