ಉಪ್ಪು ನೀರು ತಡೆ ದಂಡೆ ನಿರ್ಮಾಣಕ್ಕೆ ಅನುದಾನ

kodgi
Published on

ಕುಂದಾಪುರ: ಕುಂದಾಪುರ ಕೋಡಿ ಪರಿಸರದಲ್ಲಿ ಕೃಷಿ ಜಮೀನು ಮತ್ತು ಮನೆಗಳಿಗೆ ಉಪ್ಪು ನೀರು ಬರದಂತೆ ತಡೆಯಲು ನದಿ ದಂಡೆ ಸಂರಕ್ಷಣೆಗೆ ಅನುದಾನ ಮಂಜೂರು ಮಾಡಲು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ವಿಧಾನಸಭೆ ಅಧಿವೇಶನ ಸಂದರ್ಭ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜ ಅವರನ್ನು ಭೇಟಿ ಮಾಡಿ ಮನವಿ ನೀಡಿದರು.

ಕೋಡಿ ಪರಿಸರದಲ್ಲಿ ನದಿಗಳಿಂದ ಉಪ್ಪು ನೀರು ಉಕ್ಕಿ ಕೃಷಿ ಭೂಮಿ ಮತ್ತು ಮನೆಗಳಿಗೆ ನುಗ್ಗುತ್ತಿದ್ದು ಕೋಡಿ ಜನ ವಸತಿ ಪ್ರದೇಶದ ಗ್ರಾಮಸ್ಥರು ದಿನ ನಿತ್ಯ ಸಮಸ್ಯೆಗೆ ಒಳಗಾಗಿದ್ದಾರೆ. ನೂರಾರು ಎಕರೆ ಜಮೀನಿನಲ್ಲಿ ಕೃಷಿ ಮಾಡಲಾಗುತ್ತಿಲ್ಲ. ಕುಡಿಯುವ ನೀರೂ ಉಪ್ಪಾಗಿದ್ದು, ನೀರು ನಿಂತು ಹುಲ್ಲು ಮತ್ತು ಗಿಡಗಳು ಕೊಳೆತು ವಿಪರೀತ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಉಪ್ಪು ನೀರು ಬರದಂತೆ ತಡೆಯಲು ನದಿ ದಂಡೆ ನಿರ್ಮಾಣ ಅಗತ್ಯವಿದ್ದು, ಅನುದಾನ ಮಂಜೂರು ಮಾಡುವಂತೆ ಕೋರಿ ಶಾಸಕರು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net