

ಬೈಂದೂರು: ಮನುಷ್ಯನ ಜೀವದಲ್ಲಿರುವ ರಕ್ತ ಜಾತಿ ಧರ್ಮಾದಾರಿತವಲ್ಲ. ರಕ್ತದಾನದ ಮೂಲಕ ಅಪಾಯದಲ್ಲಿರುವ ರೋಗಿ ಜೀವರಕ್ಷಣೆಯಾಗುವುದನ್ನು ನಾವು ನಿತ್ಯ ಕಾಣುತ್ತಿದ್ದೇವೆ. ಆದರಿಂದ ರಕ್ತದಾನ ಮಾಡುವುದು ಮತ್ತು ಪ್ರೋತ್ಸಾಹಿಸುವುದು ಕರ್ತವ್ಯ ಎಂದು ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ ಅಮೀನ್ ಕೋಡಿ ಹೇಳಿದರು.
ಬೈಂದೂರಿನಲ್ಲಿ ಭಾನುವಾರ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಬೈಂದೂರು-ಶಿರೂರು ಘಟಕ, ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ವಿಶ್ವಕರ್ಮ ಯುವಕ ಸಂಘ ಬೈಂದೂರು, ಜೆಸಿಐ ಬೈಂದೂರು ಸಿಟಿ, ರೋಟರಿ ಕ್ಲಬ್ ಬೈಂದೂರು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ, ಜಿಲ್ಲಾಡಳಿತ ಉಡುಪಿ ಸಹಯೋಗದಲ್ಲಿ ಭಾನುವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕ ಅಧ್ಯಕ್ಷ ಸೋಮಶೇಖರ ಜಿ.ಕಸ್ಟಮ್ ಅಧ್ಯಕ್ಷತೆ ವಹಿಸಿದ್ದರು. ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನ ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ಯ ಕಳಿ, ಬೈಂದೂರು ಸಿಟಿ ಜೆಸಿಐ ಅಧ್ಯಕ್ಷ ರಾಜು ಮೊಗವೀರ, ಬೈಂದೂರು ಸೇವಾ ಸಂಗಮ ಶಿಶು ಮಂದಿರ ಅಧ್ಯಕ್ಷ ಮಂಜುನಾಥ ಶೆಟ್ಟಿ, ಮೊಗವೀರ ಯುವ ಸಂಘಟನೆ ಜಿಲ್ಲಾ ನಿಕಟ ಪೂರ್ವಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ, ಮೊಗವೀರ ಯುವ ಸಂಘಟನೆ ಬೈಂದೂರು ಘಟಕ ನಿಕಟಪೂರ್ವಾಧ್ಯಕ್ಷ ರವಿರಾಜ ಚಂದನ್ ಕಳವಾಡಿ, ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ರವೀಂದ್ರ ಪುತ್ರನ್, ಮಾಜಿ ಕಾರ್ಯದರ್ಶಿ ರವೀಶ್ ಕೊರವಡಿ, ನಿಕಟ ಪೂರ್ವಾಧ್ಯಕ್ಷ ಕೃಷ್ಣ ಮೊಗವೀರ, ಡಾ.ಶರತ್ ಉಪಸ್ಥಿತರಿದ್ದರು. ನಟರಾಜ್ ಕಾರ್ಯಕ್ರಮ ನಿರ್ವಹಿಸಿದರು.