ಬೆಂಗಳೂರು: ಕರಾವಳಿ ಮೂಲದ ಮೇಘಾ ಶೆಟ್ಟಿ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಜನಪ್ರಿಯರಾದವರು. ಬಳಿಕ ಬೆಳ್ಳಿತೆರೆಯಲ್ಲಿ ಅವಕಾಶ ಪಡೆದುಕೊಂಡ ಮೇಘಾ, ‘ಕೈವ’, ‘ದಿಲ್ ಪಸಂದ್’, ‘ತ್ರಿಬಲ್ ರೈಡಿಂಗ್’ ಸಿನಿಮಾಗಳಲ್ಲಿ ನಟಿಸಿದ್ದರು. ಈ ಮೂರು ಚಿತ್ರಗಳ ನಟನೆಗೆ ಮೆಚ್ಚುಗೆ ಸಿಕ್ಕ ಬಳಿಕ ಮೇಘಾ ಶೆಟ್ಟಿ ಬಿಜಿಯಾಗಿದ್ದು, ಸದ್ಯ ಇವರ ಕೈಯಲ್ಲಿ ಮೂರು ಚಿತ್ರಗಳಿವೆ.ಈ ಬಗ್ಗೆ ನಟಿ ‘ವಿಜಯವಾಣಿ’ ಜತೆ ಮಾತನಾಡಿದ್ದು, ‘ಸದ್ಯ ಈ ವರ್ಷ ಸರಳವಾಗಿ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳುತ್ತಿದ್ದೇನೆ. ತುಂಬಾ ಅದ್ದೂರಿ ಏನಿಲ್ಲ. ಆದರೆ, ನಾನು ನಟಿಸಿರುವ ಮೂರು ಸಿನಿಮಾಗಳು ತೆರೆಗೆ ಬರುವ ಕಾರಣ ಈ ವರ್ಷದ ಹುಟ್ಟುಹಬ್ಬ ವಿಶೇಷವಾಗಲಿದೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.
ಮುಂದಿನ ಮೂರು ಸಿನಿಮಾಗಳು: ‘ನಾನು ನನ್ನ ಕನಸು’ ಖ್ಯಾತಿಯ ಸಡಗರ ರಾಘವೇಂದ್ರ ನಿರ್ದೇಶನದ ‘ಆ್ಟರ್ ಆಪರೇಶನ್ ಲಂಡನ್ ಕೆೆ’ ಚಿತ್ರದಲ್ಲಿ ಮೇಘಾ ಶೆಟ್ಟಿ ಹಳ್ಳಿ ಹುಡುಗಿ ಪಾತ್ರದಲ್ಲಿ ನಿರ್ವಹಿಸುತ್ತಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಲಂಗ ದಾವಣಿಯಲ್ಲಿ ಮಿಂಚಿದ್ದಾರೆ. ಚಿತ್ರದ ಕುರಿತು, ‘ಆ್ಟರ್ ಆಪರೇಶನ್ ಲಂಡನ್ ಕೆೆ’ ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಹಳ್ಳಿಯ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕನ್ನಡ ಸೇರಿ ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗುತ್ತದೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ. ಇನ್ನು, ದೇವನೂರು ಚಂದ್ರು- ವಿನಯ್ ರಾಜಕುಮಾರ್ ಕಾಂಬಿನೇಷನ್‌ನ ‘ಗ್ರಾಮಾಯಣ’ ಹಾಗೂ ‘ಚೀತಾ’ ಸಿನಿಮಾಗಳ ಶೂಟಿಂಗ್ ಶೇ.20ರಷ್ಟು ಬಾಕಿಯಿದೆ. ಈ ಎರಡು ಸಿನಿಮಾಗಳು ಇದೇ ವರ್ಷ ತೆರೆಗೆ ಬರಲಿವೆ’ ಎನ್ನುತ್ತಾರೆ.
ಪೌರಾಣಿಕ ಪಾತ್ರ ಇಷ್ಟ: ‘ಆ್ಟರ್ ಆಪರೇಶನ್ ಲಂಡನ್ ಕೆೆ’, ‘ಗ್ರಾಮಾಯಣ’ ಎರಡರಲ್ಲಿ ಮೇಘಾ ಶೆಟ್ಟಿ ಹಳ್ಳಿ ಹುಡುಗಿಯಾಗಿದ್ದಾರೆ. ಈ ಮೂಲಕ ಹಳ್ಳಿ ಜೀವನ ಇಷ್ಟ ಪಡುವ ಈ ನಟಿಗೆ ಬಬ್ಲಿ ಹಾಗೂ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟವಂತೆ. ‘ನಾನು ವಿಭಿನ್ನ ಪಾತ್ರಗಳನ್ನು ಇಷ್ಟಪಡುತ್ತೇನೆ. ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಅಭಿಲಾಷೆಯಿದೆ. ಈಗಾಗಲೇ ಮೂರು- ನಾಲ್ಕು ಚಿತ್ರದ ಕಥೆಗಳನ್ನು ಕೇಳಿದ್ದೇನೆ. ಆದರೆ, ಯಾವುದನ್ನು ೈನಲ್ ಮಾಡಿಲ್ಲ. ಅಂತಿಮವಾದರೆ ತಿಳಿಸುವೆ’ ಎನ್ನುತ್ತಾರೆ.
ನನನ್ನು ಅರ್ಥ ಮಾಡಿಕೊಳ್ಳುವ ಸ್ನೇಹಿತರು: ‘ನನಗೆ ಬಾಲ್ಯ ಸ್ನೇಹಿತರಿಂದ ಈಗಿನ ಸ್ನೇಹಿತರೆಲ್ಲರೂ ಸಂಪರ್ಕದಲ್ಲಿದ್ದಾರೆ. ಅವರು ನೀಡುವ ಪ್ರೀತಿಗೆ ಬೆಲೆ ಕಟ್ಟಲಾಗದು. ನಾನು ಶೂಟಿಂಗ್‌ನಲ್ಲಿ ಹೆಚ್ಚು ಬಿಜಿ ಇರುವ ಕಾರಣ ಅವರನ್ನು ಭೇಟಿ ಮಾಡಲು ಆಗುವುದಿಲ್ಲ. ಇದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಈ ಗುಣ ದೊಡ್ಡದು’ ಎಂದು ಸ್ನೇಹಿತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.