ಪೊಲೀಸರ ಜತೆಗೆ ಜಗಳಕ್ಕೇ ನಿಂತ್ರು ಜಿ.ಪಂ.ಸದಸ್ಯೆ!

belagavi zp member saraswati patil quarels with police officials
Published on

ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನದ ನಡುವೆ ಅಕ್ರಮಗಳು ನಡೆಯುತ್ತಿರುವ ಬಗ್ಗೆಯೂ ವರದಿಗಳು ಬರತೊಡಗಿವೆ. ಬೆಳಗಾವಿ ತಾಲೂಕಿನಲ್ಲಿ ಇಂತಹ ಘಟನೆ ನಡೆದಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯೆ ಪೊಲೀಸರ ಜತೆಗೆ ಜಗಳಕ್ಕೇ ನಿಂತದ್ದೂ ಗಮನಸೆಳೆಯಿತು.

ಬೆಳಗಾವಿ ತಾಲೂಕಿನ ಕೆ.ಎಚ್.ಕಂಗ್ರಾಳಿ ಮತಗಟ್ಟೆಯಲ್ಲಿ ಈ ಘಟನೆ ನಡೆಯಿತು. ಜಿಪಂ ಸದಸ್ಯೆ ಸ್ವರಸ್ವತಿ ಪಾಟೀಲ್ ಪೊಲೀಸರ ವಿರುದ್ಧ ಹರಿಹಾಯ್ದ ದೃಶ್ಯ ಕಂಡುಬಂತು. ಸರಸ್ವತಿ ಪಾಟೀಲ್ ಅವರು ಮತಗಟ್ಟೆ ಒಳಗೆ ಹೋಗುತ್ತಿದ್ದ ಮತದಾರರನ್ನು ತಡೆದು ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ಇದನ್ನು ಪೊಲೀಸರು ತಡೆದ ಕಾರಣ ಸಿಟ್ಟಿಗೆದ್ದ ಸರಸ್ವತಿ ಪಾಟೀಲ್ ಅವರ ಜತೆಗೇ ವಾಗ್ವಾದಕ್ಕಿಳಿದರು.

ಪೊಲೀಸರು ಕೂಡಲೇ ಪರಿಸ್ಥಿತಿ ತಿಳಿಗೊಳಿಸಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಸರಸ್ವತಿ ಪಾಟೀಲ್ ಅವರಿಗೆ ಹೊರ ಹೋಗುವಂತೆ ಮನವಿ ಮಾಡಿದರು. ಅನಿವಾರ್ಯವಾಗಿ ಸರಸ್ವತಿ ಪಾಟೀಲ್ ಅಲ್ಲಿಂದ ಜಾಗ ಖಾಲಿ ಮಾಡಿದರು.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net