ಕೋಡಿ ಗ್ರಾಪಂನಲ್ಲಿ ಅಂಗವಿಕಲರ ಗ್ರಾಮಸಭೆ

kodi
Published on

ಕೋಟ: ಕೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಖಾರ್ವಿಯವರ ಅಧ್ಯಕ್ಷತೆಯಲ್ಲಿ ಗ್ರಾಪಂ 2024-25ನೇ ಸಾಲಿನ ಅಂಗವಿಕಲರ ಗ್ರಾಮಸಭೆ ಇತ್ತೀಚೆಗೆ ಜರುಗಿತು.

ಉಡುಪಿ ತಾಲೂಕು ಪುನರ್ವಸತಿ ಕಾರ್ಯಕರ್ತ ಮಧುಸೂದನ್ ರಾವ್ ವಿಕಲಚೇತನರಿಗೆ ಸರ್ಕಾರ ಹಾಗೂ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಳಿಸಿದರು.

ವಿಕಲಚೇತನ ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚಕ್ಕೆ ಚೆಕ್, ವಾಟರ್ ಬೆಡ್ ವಿತರಿಸಲಾಯಿತು. ಉಡುಪಿ ಜಿಲ್ಲಾಸ್ಪತ್ರೆ ಮನಶಾಸ್ತ್ರಜ್ಞ ವೈಶಾಖ್, ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕೋಡಿ ಕನ್ಯಾಣ ಸಮುದಾಯ ಆರೋಗ್ಯಾಧಿಕಾರಿ ಪರಸಪ್ಪ ದೊಡ್ಡಮನಿ, ಪಂಚಾಯಿತಿ ಸದಸ್ಯರಾದ ಕೆ.ಪ್ರಭಾಕರ ಮೆಂಡನ್, ಸತೀಶ್ ಜಿ.ಕುಂದರ್, ಅಂಗನವಾಡಿ ಕಾರ್ಯಕರ್ತೆ ಲೀಲಾವತಿ, ವಿಕಲಚೇತನ ಫಲಾನುಭವಿಗಳು, ಗ್ರಾಪಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪಿಡಿಒ ರವೀಂದ್ರ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net