

ಗಂಗೊಳ್ಳಿ: ಉತ್ತಮವಾಗಿ ಹಣಕಾಸು ನಿರ್ವಹಣೆ ಮಾಡಿದರೆ ಮಾತ್ರ ಆರ್ಥಿಕ ಸಂಸ್ಥೆ ಅಭಿವೃದ್ಧಿ ಹೊಂದುತ್ತವೆ. ಪ್ರಾಮಾಣಿಕ, ಸಂಸ್ಥೆಯನ್ನು ಪ್ರೀತಿಸುವ ಸಿಬ್ಬಂದಿ ಸಂಸ್ಥೆಯ ಆಸ್ತಿ ಎಂದು ಗಂಗೊಳ್ಳಿ ಉದ್ಯಮಿ ಎಚ್.ಗಣೇಶ ಕಾಮತ್ ಹೇಳಿದರು.
ಗಂಗೊಳ್ಳಿ ರಥಬೀದಿ ಸಮೀಪದ ವೆಂಕಟೇಶ ಕೃಪಾ ಕಟ್ಟದಲ್ಲಿ ಕರ್ಣಾಟಕ ಬ್ಯಾಂಕ್ನ 949ನೇ ಗಂಗೊಳ್ಳಿ ಶಾಖೆ, ಮಿನಿ ಇ-ಲಾಬಿಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಮಾತನಾಡಿ, ಐದು ರಾಷ್ಟ್ರೀಕೃತ ಬ್ಯಾಂಕ್ ಜನ್ಮ ತಾಳಿದ ದ.ಕ. ಜಿಲ್ಲೆಯಲ್ಲಿ ಕರ್ಣಾಟಕ ಬ್ಯಾಂಕ್ 1.70 ಲಕ್ಷ ಕೋಟಿ ವ್ಯವಹಾರ ನಡೆಸುತ್ತಿದ್ದು, 400 ತ್ರೈಮಾಸಿಕದಲ್ಲೂ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 736 ಕೋಟಿ ರೂ. ಲಾಭ ಗಳಿಸಿರುವ ಬ್ಯಾಂಕ್, ಒಂದು ಸಾವಿರ ಕೋಟಿ ಮಿಕ್ಕಿ ಲಾಭ ಗಳಿಸುವತ್ತ ಮುನ್ನಡೆಯುತ್ತಿದೆ ಎಂದರು.
ಬ್ಯಾಂಕ್ ಜನರಲ್ ಮ್ಯಾನೇಜರ್ ವಿನಯ್ ಭಟ್ ಪಿ.ಜೆ. ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಶುಭಾಶಂಸನೆಗೈದರು. ಕಟ್ಟಡ ಮಾಲೀಕರಾದ ಜಿ.ಭಾಸ್ಕರ ಶೆಣೈ, ಜಯಶ್ರೀ ಶೆಣೈ ದಂಪತಿಯನ್ನು ಸನ್ಮಾನಿಸಲಾಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಎಚ್.ಗಣೇಶ ಕಾಮತ್, ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರನ್ನು ಗೌರವಿಸಲಾಯಿತು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ ಉಪಸ್ಥಿತರಿದ್ದರು. ಅಪರ್ಣಾ ಹೊಳ್ಳ ಪ್ರಾರ್ಥಿಸಿದರು. ಬ್ಯಾಂಕ್ ಉಡುಪಿ ವೃತ್ತದ ಎಜಿಎಂ ವಾದಿರಾಜ್ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ರಾವ್ ಸಮಿತ್ ಭಾಸ್ಕರ್ ವಂದಿಸಿದರು.
ಅವಿಭಜಿತ ದ.ಕ. ಜಿಲ್ಲೆ ರಾಷ್ಟ್ರೀಕೃತ ಬ್ಯಾಂಕ್ ಹುಟ್ಟಿದ ನೆಲ. ಇಡೀ ಭಾರತ ದೇಶಕ್ಕೆ ಬ್ಯಾಂಕಿಂಗ್ ಉದ್ಯಮ ನೀಡಿದೆ. ಬ್ಯಾಂಕ್ಗಳ ವಿಲೀನದಿಂದ ನಮ್ಮ ಜಿಲ್ಲೆಯಲ್ಲಿ ಹುಟ್ಟಿದ ಕೆಲವೊಂದು ರಾಷ್ಟ್ರೀಕೃತ ಬ್ಯಾಂಕ್ಗಳ ಹೆಸರು ಬದಲಾವಣೆ ಹೊಂದಿದೆ. ನಂಬಿಕೆ ಉಳಿಸಿಕೊಂಡಿರುವ ಕೆಲವೇ ವಾಣಿಜ್ಯ ಬ್ಯಾಂಕ್ಗಳಲ್ಲಿ ಕರ್ಣಾಟಕ ಬ್ಯಾಂಕ್ ಒಂದು ಎನ್ನುವ ಹೆಮ್ಮೆ ಇದೆ. -ಕೋಟ ಶ್ರೀನಿವಾಸ ಪೂಜಾರಿ ಸಂಸದ https://www.vijayavani.net/netajis-ideal-guiding-light https://www.vijayavani.net/the-bantwadi-dam-is-leaking