ನೂಜಿಬಾಳ್ತಿಲಕ್ಕೆ ಜಿಪಂ ಸಿಇಒ ಭೇಟಿ

New Project (10)
Published on

ಕಡಬ: ದ.ಕ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ಕರ್ಬಾರಿ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಪಂ ವ್ಯಾಪ್ತಿಗೆ ಭೇಟಿ ನೀಡಿ ಜಲಜೀವನ್ ಮಿಷನ್ ಯೋಜನೆಯ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ನೂಜಿಬಾಳ್ತಿಲ ಗ್ರಾಪಂ ವ್ಯಾಪ್ತಿಯ ಗೋಳಿಯಡ್ಕ ಶಾಲಾ ಬಳಿ, ಕನ್ವಾರೆ ಬಳಿ ನಿರ್ಮಾಣಗೊಂಡಿರುವ ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ಟ್ಯಾಂಕ್ ವೀಕ್ಷಿಸಿ, ಇಂಜಿನಿಯರ್‌ಗಳಿಂದ ಮಾಹಿತಿ ಪಡೆದರು. ಯೋಜನೆ ಪೈಪ್‌ಲೈನ್, ಇತರೆ ಕಾಮಗಾರಿ ಪರಿಶೀಲನೆ ನಡೆಸಿದರು. ಪರಿಸರದ ವಿವಿಧ ಮನೆಗಳಿಗೆ ತೆರಳಿ ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ನಳ್ಳಿಯಿಂದ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿದಿಯೇ ಎಂದು ಪರಿಶೀಲನೆ ನಡೆಸಿ, ಮನೆಯವರಿಂದ ಮಾಹಿತಿ ಪಡೆದರು. ನೀರು ಬರುತ್ತಿರುವ ಬಗ್ಗೆ ಮನೆಯವರು ಸಿಇಒ ಅವರಿಗೆ ತಿಳಿಸಿದರು. ಅಧಿಕಾರಿಗಳು, ಗ್ರಾಪಂನವರು ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿ ಬಗ್ಗೆ ತಿಳಿಸಿದರು.

ಕಡಬ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಇಂಜಿನಿಯರ್ ಹುಕ್ಕೇರಿ, ನೂಜಿಬಾಳ್ತಿಲ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷ ಚಂದ್ರಶೇಖರ ನೂಜಿ, ಸದಸ್ಯೆ ಗಂಗಮ್ಮ ಕಲ್ಲುಗುಡ್ಡೆ, ಪಿಡಿಒ ಆನಂದ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿಗೆ ಭೇಟಿ

ಸಿಇಒ ವಿನಾಯಕ ಕರ್ಬಾರಿ ನೂಜಿಬಾಳ್ತಿಲ ಗ್ರಾಪಂ ಕಚೇರಿಗೆ ಭೇಟಿ ನೀಡಿದರು. ಗ್ರಾಪಂ ವತಿಯಿಂದ ಸಿಇಒ ಅವರನ್ನು ಸ್ವಾಗತಿಸಲಾಯಿತು. ಸಿಇಒ ತೆರಿಗೆ ಸಂಗ್ರಹ, ನರೇಗಾ ಯೋಜನೆ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿ ದಾಖಲೆ ಪತ್ರ, ಕಡತ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net