

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಅಗರಿಕಜೆ ಎಂಬಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಹಿರಿಯರಾದ ಇಂದಿರಾ ದೇವರಗದ್ದೆ ಉದ್ಘಾಟಿಸಿದರು.
ಹಿರಿಯರಾದ ಮಾಧವ ದೇವರಗದ್ದೆ ಶುಭ ಹಾರೈಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಕುಕ್ಕೆ ದೇಗುಲ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸೌ ಮ್ಯಾ ಭರತ್, ಮಾಸ್ಟರ್‌ಪ್ಲಾನ್ ಸಮಿತಿ ಮಾಜಿ ಸದಸ್ಯ ಶಿವರಾಮ ರೈ, ಸದಸ್ಯ ಪವನ್ ಎಂ.ಡಿ., ಕುಕ್ಕೆ ದೇಗುಲ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಮಾಧವ ಡಿ.ದೇವರಗದ್ದೆ, ಮಾಜಿ ಗ್ರಾಪಂ ಸದಸ್ಯರಾದ ಕಿಶೋರ್ ಅರಂಪಾಡಿ, ಸುರೇಶ್ ಭಟ್, ಗುತ್ತಿಗೆದಾರ ಅವಿನಾಶ್ ಪಳ್ಳಿಗದ್ದೆ, ಪ್ರಮುಖರಾದ ದಾಮೋದರ ನಾಯರ್, ಉಮೇಶ್ ಜೆ., ಲತೇಶ್ ದೇವರಗದ್ದೆ, ಶೇಷಕುಮಾರ್ ಶೆಟ್ಟಿ, ಮಾಧವ ಶೆಟ್ಟಿಗಾರ್, ಭರತ್ ಕಲ್ಲಗುಡ್ಡೆ, ಕಾರ್ತಿಕ್ ದೇವರಗದ್ದೆ, ಭುವನೇಶ್ ದೇವರಗದ್ದೆ, ಸೂರ್ಯಾಂಶು ದೇವರಗದ್ದೆ, ಪದ್ಮನಾಭ, ತಾರಾನಾಥ್ ಕೋನಡ್ಕ, ಸುಬ್ರಹ್ಮಣ್ಯ ಮಾನಾಡು ಮತ್ತಿತರರಿದ್ದರು.