ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಎರಡನೇ ಅವಧಿಗೆ ಮೀಸಲು ಪ್ರಕಟ

HB Halli Meeting
ಹಗರಿಬೊಮ್ಮನಹಳ್ಳಿ ಹರ ಕಲ್ಯಾಣ ಮಂಟಪದಲ್ಲಿ 21 ಗ್ರಾಪಂಗಳ ಮೀಸಲು ನಿಗದಿ ಸಭೆ ಗುರುವಾರ ನಡೆಯಿತು.
Published on

ಹಗರಿಬೊಮ್ಮನಹಳ್ಳಿ: ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕಿನ 21 ಗ್ರಾಪಂಗಳ ಸದಸ್ಯರ ಸಂಖ್ಯೆ ಹಾಗೂ ಮಹಿಳಾ ಮೀಸಲಾತಿ ಅನುಗುಣವಾಗಿ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಪಟ್ಟಣದ ಹರ ಕಲ್ಯಾಣಮಂಟಪದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಗ್ರಾಪಂಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲು ನಿಗದಿ ಸಭೆಯಲ್ಲಿ ಮಾತನಾಡಿದರು. ಒಮ್ಮೆ ಆಯ್ಕೆಯಾದವರ ಬಿಟ್ಟು ಮೀಸಲು ನಿಗದಿಪಡಿಸಲಾಗಿದೆ.

ಸಮಬಲ ಹೊಂದಿದ ಸದಸ್ಯರಿರುವ ಗ್ರಾಪಂಗಳಿಗೆ ಚೀಟಿ ಎತ್ತುವ ಮೂಲಕ ಮೀಸಲು ನಿಗದಿ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು. ಅಪಾರ ಜಿಲ್ಲಾಧಿಕಾರಿ ಅನುರಾಧಾ, ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ, ತಾಪಂ ಇಒ ಜಿ.ಪರಮೇಶ್ವರಪ್ಪ ಇತರರಿದ್ದರು.

ಪಂಚಾಯಿತಿವಾರು ಮೀಸಲಾತಿ ವಿವರ: ಹನಸಿ ಗ್ರಾಪಂ ಅಧ್ಯಕ್ಷ ಸ್ಥಾನ (ಸಾಮಾನ್ಯ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಮಾಲವಿ ಪಂಚಾಯಿ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ನೀಡಲಾಗಿದೆ.

ಉಳಿದಂತೆ ದಶಮಾಪುರ-ಅಧ್ಯಕ್ಷ (ಎಸ್ಸಿ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಬೆಣ್ಣಿಕಲ್ಲು-ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್ಟಿ, ಹಂಪಸಾಗರ -ಎರಡೂ ಸ್ಥಾನಗಳು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.

ಬನ್ನಿಕಲ್ಲು-ಸಾಮಾನ್ಯ ಮತ್ತು ಎಸ್ಸಿ ಮಹಿಳೆ, ಮೋರಗೇರಿ-ಎಸ್ಸಿ ಮಹಿಳೆ ಮತ್ತು ಸಾಮಾನ್ಯ, ಸೊನ್ನ-ಎಸ್ಟಿ ಮತ್ತು ಸಾಮಾನ್ಯ ಮಹಿಳೆ, ತಂಬ್ರಹಳ್ಳಿ-ಎಸ್ಟಿ ಮಹಿಳೆ ಮತ್ತು ಸಾಮಾನ್ಯ, ಮರಬ್ಬಿಹಾಳು-ಎಸ್ಸಿ ಹಾಗೂ ಸಾಮಾನ್ಯ ಮಹಿಳೆ, ಮುತ್ಕೂರು-ಸಾಮಾನ್ಯ ಮತ್ತು ಎಸ್ಸಿ ಮಹಿಳೆ.

ಬಾಚಿಗೊಂಡೆನಹಳ್ಳಿ-ಎಸ್ಸಿ ಮತ್ತು ಪ್ರವರ್ಗ-ಎ ಮಹಿಳೆ, ಬನ್ನಿಗೋಳ- ಎಸ್ಸಿ ಮಹಿಳೆ ಮತ್ತು ಸಾಮಾನ್ಯ, ಬ್ಯಾಸಿಗಿದೇರಿ-ಸಾಮಾನ್ಯ ಮತ್ತು ಎಸ್ಸಿ ಮಹಿಳೆ, ಹಲಗಾಪುರ-ಸಾಮಾನ್ಯ ಮತ್ತು ಎಸ್ಟಿ ಮಹಿಳೆ, ಕಡಲಬಾಳು-ಸಾಮಾನ್ಯ ಮಹಿಳೆ ಹಾಗೂ ಎಸ್ಸಿ, ಹಂಪಾಪಟ್ಟಣ-ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ, ಮಾದೂರು-ಸಾಮಾನ್ಯ ಮಹಿಳೆ ಮತ್ತು ಎಸ್ಸಿ, ನೆಲ್ಕುದ್ರಿ-ಸಾಮಾನ್ಯ ಮತ್ತು ಎಸ್ಟಿ ಮಹಿಳೆ.

ಗದ್ದಿಕೇರಿ-ಪ್ರವರ್ಗ-ಎ ಮಹಿಳೆ ಹಾಗೂ ಎಸ್ಸಿ, ವಲ್ಲಭಾಪುರ ಗ್ರಾಪಂ ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net