ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಮೀಸಲು ಪ್ರಕಟ

election3
Published on

ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ತೀವ್ರ ಕುತೂಹಲದಿಂದ ಕಾಯುತ್ತಿದ್ದ ಸದಸ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿ ಮಾಡಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಆ.14ರಂದು ಆದೇಶಿಸಿದ್ದು, ಕರ್ನಾಟಕ ರಾಜ್ಯ ಪತ್ರದಲ್ಲಿಯೂ ಜಿಲ್ಲೆಯ 10 ತಾಲೂಕುಗಳ ಪಟ್ಟಿ ಪ್ರಕಟಿಸಲಾಗಿದೆ.

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ 1993ರ 5ನೇ ಪ್ರಕರಣದ ಉಪ ಪ್ರಕರಣ (5)ದ ಅನ್ವಯ ಗ್ರಾಪಂ ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸಿ ಮೀಸಲಾತಿ ಹಂಚಲಾಗಿದ್ದು ಲೋಕಲ್ ಫೈಟ್‌ಗೆ ಅಖಾಡ ಸಜ್ಜಾಗಿದೆ.

ರಾಜ್ಯ ಸರ್ಕಾರ ಇನ್ನು ಕೆಲವೇ ತಿಂಗಳಲ್ಲಿ ಗ್ರಾಪಂ ಚುನಾವಣೆ ನಡೆಸುವುದಾಗಿ ೋಷಿಸಿರುವ ಬೆನ್ನ ಹಿಂದೆಯೇ ಮೀಸಲು ಪ್ರಕಟವಾಗಿದ್ದು ಎಲ್ಲ ಗ್ರಾಮಗಳಲ್ಲಿಯೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಹುತೇಕ ಕಡೆಗಳಲ್ಲಿ ಮೀಸಲಾತಿಯೇ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧ ರಿಸುವುದರಿಂದ ಬಯಸಿದ ಮೀಸಲಾತಿಗಾಗಿ ಲಾಬಿ ನಡೆದಿತ್ತು.

ಜಿಲ್ಲೆಯಲ್ಲಿ 2,574 ಗ್ರಾಮಗಳಿದ್ದು 330 ಗ್ರಾಪಂಗಳಿವೆ. ಪ್ರಸ್ತುತ ಎಲ್ಲ ಗ್ರಾಪಂಗಳ ಸದಸ್ಯರ ಆಡಳಿತಾವಧಿ ಪೂರ್ಣವಾಗಿದೆ. ಆಡಳಿತಾಧಿಕಾರಿಗಳನ್ನು ಈಗಾಗಲೇ ನೇಮಿಸಿದ್ದು ಆಡಳಿತದಲ್ಲಿ ಜನರ ಭಾಗವಹಿಸುವಿಕೆ ಇಲ್ಲವಾಗಿದೆ. ಚುನಾವಣೆಯ ಮೊದಲ ಹಂತವಾಗಿ ಮೀಸಲಾತಿ ಪ್ರಕಟವಾದ ಕೂಡಲೇ ಎಲ್ಲೆಡೆಯೂ ಮತದಾರರ ಓಲೈಕೆ ಕಸರತ್ತು ಆರಂಭವಾಗಿದೆ.

ಮೀಸಲಾತಿಗೆ ರಾಜಕೀಯ ಪ್ರಭಾವ? ಸದಸ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗುತ್ತಿರುವ ವಿಷಯ ತಿಳಿದ ಆಕಾಂಕ್ಷಿಗಳು ತಮ್ಮ ತಮ್ಮ ರಾಜಕೀಯ ಮುಖಂಡರ ಮೂಲಕ ಜಿಲ್ಲಾಡಳಿತ ಮೇಲೆ ಪ್ರಭಾವ ತಂದಿದ್ದರು, ಗೆಜೆಟ್ ಪ್ರಕಟಣೆಯ ಮುಂಚೆಯೇ ಮೀಸಲಾತಿ ಪಟ್ಟಿ ಜನರಿಗೆ ಲಭ್ಯವಾಗಿದ್ದ ಬಗ್ಗೆಯೂ ಸಾಕಷ್ಟು ಚರ್ಚೆ ನಡೆದಿತ್ತು. ಸದಸ್ಯ ಒಟ್ಟು ಸ್ಥಾನಗಳಲ್ಲಿ ಶೇ.50ರಷ್ಟು ಸ್ಥಾನಗಳು ಸಾಮಾನ್ಯರಿಗೆ ಹಾಗೂ ಎಲ್ಲ ಮೀಸಲಾತಿಗಳಲ್ಲಿಯೂ ಶೇ.50ರಷ್ಟು ಮಹಿಳೆಯರಿಗೆ ಮೀಸಲಾಗಲಿದ್ದು ಮಹಿಳೆಯ ಹೆಸರಿನಲ್ಲಿಯೂ ಪತಿರಾಯದ ದರ್ಬಾರ್ ನಡೆಯಬೇಕಿದೆ. ಬಹುತೇಕ ಗ್ರಾಮಗಳಲ್ಲಿ ಸಾಮಾನ್ಯ ಸ್ಥಾನ ಅಭಾತಿತವಾಗಿದ್ದು ನಾಯಕತ್ವ ಬೆಳೆಸಿಕೊಳ್ಳಲು ವೇದಿಕೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net