ಸಂಕಷ್ಟಗಳನ್ನು ಮೆಟ್ಟಿನಿಂತು ಶಿಕ್ಷಕಿಯಾದ ಯುವತಿಗೆ ರಾಜಭವನಕ್ಕೆ ಆಹ್ವಾನಿಸಿದ ರಾಜ್ಯಪಾಲರು..!

Selvamari
Published on

ಕುಮಿಲಿ: ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಂತು ಹೈಸ್ಕೂಲ್​ ಶಿಕ್ಷಕಿಯಾದ ಕೇರಳದ ಛೋಟ್ಟುಪರಾ ನಿವಾಸಿ ಸೆಲ್ವಮರಿಯನ್ನು ರಾಜ್ಯಪಾಲ ಆರೀಫ್​ ಮೊಹಮ್ಮದ್​ ಖಾನ್​ ಅಭಿನಂದಿಸಿದ್ದು, ರಾಜಭವನಕ್ಕೆ ಆಹ್ವಾನಿಸಿದ್ದಾರೆ.

ಬಾಲ್ಯದ ದಿನಗಳಿಂದಲೂ ಸೆಲ್ವಮರಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ರಜಾದಿನಗಳಲ್ಲಿ ತಮ್ಮ ತಾಯಿಯ ಜತೆ ಏಲಕ್ಕಿ ತೋಟದಲ್ಲಿ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಧಾರವಾಗಿ ನಿಲ್ಲುತ್ತಿದ್ದ ಸೆಲ್ವಮರಿ, ಕೆಲಸದ ನಡುವೆಯೂ ಓದಿನಲ್ಲೂ ಶ್ರಮವಹಿಸಿ ಇಂದು ಹೈಸ್ಕೂಲ್​ ಶಿಕ್ಷಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕುಟುಂಬದ ಸಂಕಷ್ಟಗಳನ್ನು ಇನ್ನಷ್ಟು ದೂರ ಮಾಡಿದ್ದಾರೆ.

ಸೆಲ್ವಮರಿ ಬಗ್ಗೆ ಮಾಧ್ಯಮಗಳು ಮಾಡಿದ್ದ ವರದಿಯನ್ನು ಗಮನಿಸಿ ಆಕೆಯನ್ನು ಕೇರಳ ರಾಜ್ಯಪಾಲರು ರಾಜಭವನಕ್ಕೆ ಆಹ್ವಾನಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಕೆ ರಾಜ್ಯಪಾಲರ ಕರೆಯನ್ನು ನಿರೀಕ್ಷಿಸಿರಲಿಲ್ಲ. ನನಗೆ ಏನು ಮಾತನಾಡಬೇಕೆಂಬುದು ತಿಳಿಯಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ತನ್ನ ಯಶಸ್ಸಿನ ಬಗ್ಗೆ ಮಾತನಾಡಿರುವ ಸೆಲ್ವಮರಿ ಮುಂದಿನ ಪೀಳಿಗೆಗೆ ನನ್ನ ಸ್ಟೋರಿ ಸ್ಫೂರ್ತಿ ನೀಡಲಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net