More

    ಸರ್ಕಾರ ಉರುಳಿಸಿದ್ರೆ ಸಚಿವ ಸ್ಥಾನ ಕೊಡಿಸೋ ಆಫರ್​ ಬಂದಿತ್ತು ಎಂದ ಕಾಂಗ್ರೆಸ್​ ಶಾಸಕ

    ರಾಂಚಿ: ಜಾರ್ಖಂಡ್‍ನ ಸರ್ಕಾರವನ್ನು ಉರುಳಿಸಲು ನನಗೆ ಒಂದು ಕೋಟಿ ರೂಪಾಯಿ ಆಫರ್​ ಬಂದಿತ್ತು, ಮಾತ್ರವಲ್ಲದೇ ಸಚಿವ ಸ್ಥಾನವನ್ನೂ ನೀಡುವುದಾಗಿ ಹೇಳಲಾಗಿತ್ತು ಎಂದು ಕಾಂಗ್ರೆಸ್​ ಶಾಸಕ ನಮನ್ ಬಿಕ್ಸಲ್ ಕೊಂಗಾರಿ ಹೇಳಿದ್ದಾರೆ.

    ಸದ್ಯ ಜಾರ್ಖಂಡ್​ನಲ್ಲಿ ಹೇಮಂತ ಸೊರೆನ ಮುಖ್ಯಮಂತ್ರಿಯಾಗಿದ್ದಾರೆ. ಇಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳ ಮೈತ್ರಿಯ ಸರ್ಕಾರವಿದೆ. ಈ ಸರ್ಕಾರವನ್ನು ಉರುಳಿಸಲು ಮೂರು ಜನರು ನನ್ನನ್ನು ಸಂಪರ್ಕಿಸಿದ್ದರು ಎಂದು ಕೊಂಗಾರಿ ಹೇಳಿದ್ದು, ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

    ಈ ಮಾಹಿತಿ ಸಿಕ್ಕಕೂಡಲೇ ಪೊಲೀಸರು ರಾಂಚಿಯ ಹೋಟೆಲ್ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಆದರೆ ಬಂಧನಕ್ಕೆ ಒಳಗಾದವರು ಯಾರು ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡಲಿಲ್ಲ. ಜತೆಗೆ ಕೊಂಗಾರಿ ಅವರು ಕೂಡ ಸರ್ಕಾರವನ್ನು ಉರುಳಿಸಲು ಯಾವ ಪಕ್ಷ ಪ್ರಯತ್ನಿಸಿದೆ ಎಂಬುದನ್ನು ಬಾಯಿ ಬಿಡಲಿಲ್ಲ.

    ಮೂರು ಜನರು ಪಕ್ಷದ ಕಾರ್ಯಕರ್ತರಾಗಿ ನನ್ನೊಂದಿಗೆ ಸಂಪರ್ಕಕ್ಕೆ ಬಂದರು. ತಾವು ಕೆಲವು ಸಂಸ್ಥೆಗಳಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ನನಗೆ ಅವರು ಹೇಳಿದ್ದರು. ಆದರೆ ಅವರ ಆಫರ್​ಗೆ ಒಪ್ಪದ ನಾನು ದೂರವಿರಲು ಪ್ರಯತ್ನಿಸಿದೆ; ಆದರೆ ಅವರು ಮತ್ತೆ ನನ್ನೊಂದಿಗೆ ಬೇರೆ ಬೇರೆ ರೀತಿಯಲ್ಲಿ ಸಂಪರ್ಕಕ್ಕೆ ಬಂದರು. ನಾನು ಒಪ್ಪದಿದ್ದಾಗ ನನಗೆ ಒಂದು ಕೋಟಿ ರೂಪಾಯಿಯ ಪ್ರಸ್ತಾವನೆ ನೀಡಿದ್ದೂ ಅಲ್ಲದೇ ಕೂಡಲೇ ಪಕ್ಷದ ಮುಖಂಡ ಅಲಮ್‍ಗೀರ್ ಆಲಮ್ ಮತ್ತು ಪಕ್ಷದ ಉಸ್ತುವಾರಿ ಆರ್.ಪಿ.ಎನ್. ಸಿಂಗ್ ಅವರಿಗೆ ಈ ವಿಷಯವನ್ನು ಕಿವಿಗೆ ಹಾಕಿದೆ. ಈ ಬಗ್ಗೆ ನಾನು ಮುಖ್ಯಮಂತ್ರಿ ಹೇಮಂತ ಸೊರೆನ ಅವರಿಗೂ ತಿಳಿಸಿದ್ದೆ ಎಂದು ಹೇಳಿದರು.

    ಕುಂದ್ರಾರ ವಾಟ್ಸ್​ಆ್ಯಪ್​ನಲ್ಲಿ ಕಾಣಿಸಿಕೊಂಡ ನಟಿಯೀಗ ಸಂಕಷ್ಟದಲ್ಲಿ- ಅಯ್ಯೋ ಬಿಟ್​ಬಿಡಿ ಅಂತೀರೋ ಸೈನಿ

    ಹತ್ತಿರ ಬಂದರೂ ದೂರ ಸರೀತಿದ್ದ ಗಂಡ- ಮೊಬೈಲ್​ ಫೋನ್​ನಲ್ಲಿ ಇತ್ತು ಪತಿಯ ಭಾರಿ ರಹಸ್ಯ

    20 ಗುಂಡು ಎದೆ ಸೀಳಿದರೂ 17 ಪಾಕಿಗಳ ಸದೆಬಡಿದ ಯೋಧನ ಮೈ ನವಿರೇಳಿಸುವ ಘಟನೆಯಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts