ಹೊಸ ಕ್ರಮಕ್ಕೆ ಮುಂದಾದ ಸರ್ಕಾರ; ಜನವರಿ 1ರಿಂದ ಭಿಕ್ಷುಕರಿಗೆ ಭಿಕ್ಷೆ ಹಾಕಿದರೆ FIR!

blank

ಇಂದೋರ್​: ಇಂದೋರ್ ನಗರವನ್ನು ಬಿಕ್ಷಟನೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ  2025ರ ಜ.1ರಿಂದ ಯಾರಿಗಾದರೂ ಭಿಕ್ಷೆ ಹಾಕುವುದು ಕಂಡು ಬಂದರೆ ಅವರ(ಭಿಕ್ಷೆ ನೀಡುವವರ) ವಿರುದ್ಧ ಎಫ್​ಐಆರ್(FIR) ದಾಖಲಿಸಲಾಗುವುದು ಎಂದು ಸೋಮವಾರ ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಇಂದೋರ್​ನಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ ಈಗಾಗಲೇ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೆ, ಭಿಕ್ಷಾಟನೆಯ ವಿರುದ್ಧ ನಮ್ಮ ಜಾಗೃತಿ  ಅಭಿಯಾನ ಇದೇ ಡಿಸೆಂಬರ್ ಅಂತ್ಯದವರೆಗೆ ನಡೆಯಲಿದೆ. ಜ.1ರಿಂದ ಯಾವುದಾದರೂ ವ್ಯಕ್ತಿಗೆ ಬಿಕ್ಷೆ ನೀಡಿವುದು ಕಂಡುಬಂದರೆ ಅವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಆಶಿಶ್​ ಸಿಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ: ಇಷ್ಟಪಡದವರೂ ಇಷ್ಟಪಡಬೇಕು; “ಮಾರ್ಟಿನ್​’ ಸೀಕ್ವೆಲ್​ “ರೈನೋ’ ಮಾಡುವ ಬಗ್ಗೆ ಧ್ರುವ ಸರ್ಜಾ ಸ್ಪಷ್ಟನೆ

ಇತ್ತೀಚಿನ ದಿನಗಳಲ್ಲಿ ಬಿಕ್ಷಟನೆ ಬೇಡುವಂತೆ ಮಾಡುವ ವಿವಿಧ ಗ್ಯಾಂಗ್​ಗಳಿವೆ ಎಂದು ವರದಿಯಾಗಿದ್ದು, ಕೆಲವರು ಈ ಕುರಿತು ದೂರು ಕೂಡ ಸಲ್ಲಿಸಿದ್ದಾರೆ. ಇಲ್ಲಿನ ಬಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಅಲ್ಲದೆ, ಅಂತವರು ಕಂಡುಬಂದರೆ ನಮಗೆ ಕಂಪ್ಲೇಂಟ್​ ಮಾಡಿ. ಬಿಕ್ಷೆ ನೀಡುವ ಮೂಲಕ ಪಾಪದ ಕಾರ್ಯದಲ್ಲಿ ಪಾಲುದಾರರಾಗದಂತೆ ನಾನು ಇಂದೋರ್​ನ ಜನರಲ್ಲಿ ಮನವಿ ಮಾಡಿದ್ದೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು, ಇಂದೋರ್ ಸೇರಿದಂತೆ ದೇಶದ 10 ನಗರಗಳನ್ನು ಭಿಕ್ಷುಕರ ಮುಕ್ತಗೊಳಿಸಲು ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಆಶಿಶ್​ ಸಿಂಗ್​ ವಿವರಿಸಿದರು,(ಏಜೆನ್ಸೀಸ್​).

ಮಹಿಳೆ ಕೊಲೆ ಪ್ರಕರಣವನ್ನೇ ಭೇದಿಸಿತು ಅದೊಂದು ಸಣ್ಣ ಸುಳಿವು! ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದೇ ರೋಚಕ

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…