40 ರೂ. ಕದ್ದಿದ್ದಕ್ಕೆ ಎಷ್ಟು ಶಿಕ್ಷೆಯಾಗಬಹುದು? ಏಳು ವರ್ಷ ಜೈಲು ವಾಸ ಎನ್ನುತ್ತೆ ಕಾನೂನು; ಏನಿದು ಪ್ರಕರಣ?

mint
Published on

ಮುಂಬೈ: 40 ರೂ. ಕದ್ದಿದ್ದಾನೆಂದು ಯಾರಾದರೂ ಪೊಲೀಸರಿಗೆ ದೂರು ಕೊಟ್ಟಿದ್ದನ್ನು ಕೇಳಿದ್ದೀರಾ? ಕೊಟ್ಟಿದ್ದರೂ ಅದನ್ನು ದಾಖಲಿಸಲು ಪೊಲೀಸರು ಅಷ್ಟೇ ಹಿಂದೇಟು ಹಾಕುತ್ತಾರೆ. ರಾಜಿ ಪಂಚಾಯ್ತಿ ಮಾಡಿ ಎಚ್ಚರಿಕೆ ನೀಡಿ ಕಳುಹಿಸಬಹುದೇನೋ...?

ಆದರೆ, ಇಲ್ಲೊಬ್ಬ 40 ರೂ. ಕದ್ದಿದ್ದಕ್ಕೆ ಏಳು ವರ್ಷ ಜೈಲು ಶಿಕ್ಷೆ ಅನುಭವಿಸುವ ಭೀತಿಗೆ ಎದುರಿಸುತ್ತಿದ್ದಾನೆ. ಹಾಗಂತಾ ಇದೇನೂ ದಶಕಗಳ ಹಿಂದಿನ ಪ್ರಕರಣವೇನೂ ಅಲ್ಲ. ತೀರಾ ಇತ್ತೀಚಿನದು...!

ಆತನ ಲಾಕರ್​ನಲ್ಲಿ ಸಿಕ್ಕಿದ್ದು ಎರಡು ನಾಣ್ಯ. ಅದರ ಮೌಲ್ಯ 40 ರೂ. ಅಂದ್ರೆ ಅವು 20 ರೂ. ಮುಖಬೆಲೆಯ ನಾಣ್ಯಗಳು. ಅವುಗಳಿನ್ನೂ ಬಿಡುಗಡೆಯಾಗಿಲ್ಲ. ಅಷ್ಟಕ್ಕೂ ಅವು ಸಿಕ್ಕಿದ್ದು ಮುಂಬೈ ಟಂಕಸಾಲೆಯ ಸಿಬ್ಬಂದಿ ಆರ್​.ಆರ್​. ಚಬುಕೇಶ್ವರ ಬಳಿ. 20 ರೂ. ನಾಣ್ಯಗಳನ್ನು ಏಪ್ರಿಲ್​ನಲ್ಲಿ ಪ್ರಧಾನಿ ಮೋದಿ ಬಿಡುಗಡೆ ಮಾಡಬೇಕಿತ್ತು. ಆದರೆ, ಕರೊನಾ ಸಂಕಷ್ಟದಿಂದಾಗಿ ಸಮಾರಂಭ ಮುಂದೂಡಲಾಗಿದೆ.

ಟಂಕಸಾಲೆಯಿಂದ ಕದ್ದಿದ್ದ 20 ರೂ. ಎರಡು ನಾಣ್ಯಗಳನ್ನು ಹೊರಸಾಗಿಸಲಾಗದೇ ಲಾಕರ್​ನಲ್ಲಿಯೇ ಇಟ್ಟುಕೊಂಡಿದ್ದ. ಇದು ಟಂಕಸಾಲೆಯ ಭದ್ರತೆಗೆ ನಿರತರಾಗಿರುವ ಸಿಐಎಸ್​ಎಫ್​ ಸಿಬ್ಬಂದಿಗೆ ಗೊತ್ತಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಅಪರಾಧಕ್ಕೆ ಏಳು ವರ್ಷ ಶಿಕ್ಷೆಯಾಗುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net