More

    ಈ ಬ್ಯಾಂಕ್​ಗೆ ಚೀನಾ ಸಾರಥ್ಯ, ಭಾರತವಿಲ್ಲಿ ಭಾರಿ ಸಾಲಗಾರ…! ಎಲ್ಲಿದೆ ಬ್ಯಾಂಕ್​?ಎಷ್ಟು ಸಾಲ?

    ನವದೆಹಲಿ: ಭಾರತದ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಈ ಬ್ಯಾಂಕ್​ ಈಗಾಗಲೇ ಸಾಲ ನೀಡಿದೆ. ದೆಹಲಿ- ಮೀರತ್​ ರ್ಯಾಪಿಡ್​ ರೈಲು ಯೋಜನೆ, ಮುಂಬೈ ಮೆಟ್ರೋ, ಚೆನ್ನೈ ಮೆಟ್ರೋ ಹಾಗೂ ಬೆಂಗಳೂರು ಮೆಟ್ರೋ ಯೋಜನೆಗಳಿಗೂ ಭಾರಿ ಸಾಲ ಒದಗಿಸಲಿದೆ.

    ಇದಲ್ಲದೇ, ಆಂಧ್ರಪ್ರದೇಶ, ಗುಜರಾತ್​, ತಮಿಳುನಾಡು, ರಾಜಸ್ಥಾನ, ಪಶ್ಚಿಮ ಬಂಗಾಲದ ಯೋಜನೆಗಳಿಗೂ ಈ ಬ್ಯಾಂಕ್​ನಿಂದ ಸಾಲ ಪಡೆಯಲಾಗಿದೆ. ಒಟ್ಟಾರೆ ಸಾಲದಲ್ಲಿ ಭಾರತವೇ ಶೇ.25 ಪಾಲು ಗಿಟ್ಟಿಸಿಕೊಂಡಿದೆ.

    ಇದನ್ನೂ ಓದಿ; ಕರೊನಾ ಲಸಿಕೆಗೆ ಜಗತ್ತಿನ ಅತಿ ದೊಡ್ಡ ಕ್ಲಿನಿಕಲ್​ ಟ್ರಯಲ್​; 30 ಸಾವಿರ ಜನರ ಮೇಲೆ ಪ್ರಯೋಗ 

    ಯಾವುದು ಈ ಬ್ಯಾಂಕ್​ ಅಂತೀರಾ..? ಇದೇ ಏಷ್ಯನ್​ ಇನ್​ಫ್ರಾಸ್ಟ್ರಕ್ಚರ್​ ಇನ್​ವೆಸ್ಟ್​ಮೆಂಟ್​ ಬ್ಯಾಂಕ್​. ಆರಂಭವಾದಾಗ 57 ರಾಷ್ಟ್ರಗಳು ಇದರ ಸಂಸ್ಥಾಪಕ ಸದಸ್ಯತ್ವ ಹೊಂದಿದ್ದವು. ಸದ್ಯ ಈ ಬ್ಯಾಂಕ್​ನ ಸದಸ್ಯರ ಸಂಖ್ಯೆ 102ಕ್ಕೆ ಏರಿದೆ. ಬೀಜಿಂಗ್​ಅನ್ನು ಕೇಂದ್ರಸ್ಥಾನವಾಗುಳ್ಳ ಈ ಬ್ಯಾಂಕ್​ 2000 ಕೋಟಿ ಡಾಲರ್​ಗೂ (ಅಂದಾಜು 1.5 ಲಕ್ಷ ಕೋಟಿ ರೂ.) ಹೆಚ್ಚು ಮೊತ್ತವನ್ನು ಸದಸ್ಯ ರಾಷ್ಟ್ರಗಳಿಗೆ ಸಾಲವಾಗಿ ನೀಡಿದೆ.

    ಈ ಪೈಕಿ ಅತಿ ಹೆಚ್ಚು ಸಾಲ ಪಡೆದದ್ದು ಭಾರತ. ಹೌದು… ಈಗಾಗಲೇ 33,750 ಕೋಟಿ ರೂ. ಸಾಲ ಗಿಟ್ಟಿಸಿಕೊಂಡಿದೆ. ಇನ್ನೂ 7500 ಕೋಟಿ ರೂ. ಸಾಲ ಹಂಚಿಕೆಯಾಗಬೇಕಿದೆ.

    ಚೀನಾ ನೇತೃತ್ವದ ಈ ಬ್ಯಾಂಕ್​ನಲ್ಲಿ ಭಾರತ ಕೂಡ ಸಹ-ಸಂಸ್ಥಾಪಕನ ಸ್ಥಾನ ಹೊಂದಿದೆ. 2013ರಲ್ಲಿ ಇಂಥದ್ದೊಂದು ಬ್ಯಾಂಕ್​ ಪ್ರಸ್ತಾವನೆಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಮುಂದಿಟ್ಟಿದ್ದರು. 2016ರ ಜನವರಿಯಲ್ಲಿ ಇದು ಕಾರ್ಯಾರಂಭಿಸಿತು.

    ಇದನ್ನೂ ಓದಿ; ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ಸಂದರ್ಶನ

    ಮುಖ್ಯವಾಗಿ ಇದು ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಗಳಿಗೆ ಆರ್ಥಿಕ ನೆರವು ನೀಡುತ್ತದೆ. ಜತೆಗೆ ಕೋವಿಡ್​ ಕಾರಣದಿಂದಾಗಿ ಸಂಕಷ್ಟಕ್ಕೊಳಗಾಗಿರುವ ದೇಶಗಳ ಆರ್ಥಿಕತೆ ಪುನಶ್ಚೇತನಕ್ಕೆ ನೆರವನ್ನೂ ನೀಡಿದೆ. ಇದರನ್ವಯ 1250 ಮಿಲಿಯನ್​ ಡಾಲರ್​ ( 9300 ಕೋಟಿ ರೂ. ಗೂ ಅಧಿಕ) ಮೊತ್ತವನ್ನು ಸಾಲವನ್ನು ಪಡೆದಿದೆ. ಇಂಡೋನೇಷ್ಯಾ, ಫಿಲಿಫೈನ್ಸ್​ ( ತಲಾ 750 ಮಿಲಿಯನ್​ ಡಾಲರ್​), ಪಾಕಿಸ್ತಾನಕ್ಕೆ 500 ಹಾಗೂ ಬಾಂಗ್ಲಾದೇಶಕ್ಕೆ 250 ದಶಲಕ್ಷ ಡಾಲರ್​ಗಳನ್ನು ನೀಡಲಾಗಿದೆ.
    ಏಷ್ಯಾ ಮಾತ್ರವಲ್ಲ, ಯುರೋಪ್​, ಆಫ್ರಿಕಾ, ದಕ್ಷಿಣ ಅಮೆರಿಕ ಉತ್ತರ ಅಮೆರಿಕದ ರಾಷ್ಟ್ರಗಳು ಈ ಬ್ಯಾಂಕ್​ನ ಸದಸ್ಯತ್ವ ಪಡೆದಿವೆ. ಆರು ಖಂಡಗಳ ದೇಶಗಳು ಇದರ ಸದಸ್ಯತ್ವ ಪಡೆದಿವೆ. 5ನೇ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಪ್ರಗತಿ ಬಗ್ಗೆ ಚೀನಾ ಅಧ್ಯಕ್ಷರು ಮಾಹಿತಿ ನೀಡಿದರು.

    ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts