More

    ನೀವಿನ್ನೂ ಸಿಂಗಲ್ಲಾ? ಸರ್ಕಾರದಿಂದಲೇ ಬಿಡುಗಡೆಯಾಯ್ತು ಡೇಟಿಂಗ್​ ಆ್ಯಪ್​ ​

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಮಾಡುವುದು ಸಾಮಾನ್ಯವಾಗಿದೆ. ಪ್ರೀತಿ ಮಾಡುವ ಮೊದಲು ಡೇಟಿಂಗ್ ಮಾಡಿದರೆ ನಿಮ್ಮ ಸಂಗಾತಿಯ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಕೈ ಕೈ ಹಿಡಿದು ಪಾರ್ಕ್, ಮಾಲ್, ಸಿನಿಮಾ, ಸುತ್ತಾಡಲು ಯಾರು ಇಲ್ಲವೇ ಸಿಂಗಲ್ ಆಗಿ ಎಷ್ಟು ದಿನ ಕಳೆಯಲಿ ಎಂಬ ಚಿಂತೆ ಹಲವರನ್ನು ಕಾಡುತ್ತಿರುತ್ತದೆ. ಆದರೆ, ಸರ್ಕಾರವೇ ಸಿಂಗಲ್​ ಆಗಿರುವವರಿಗೆ ಮಿಂಗಲ್​ ಆಗುವ ಅವಕಾಶ ಮಾಡಿಕೊಡುತ್ತಿದೆ. ಹೌದು ನೀವು ಕೇಳುತ್ತಿರುವುದು ನಿಜ. ಸಿಂಗಲ್​ ಆಗಿರುವವರಿಗೆ ಡೇಟಿಂಗ್​ ಆಸ್ಯಪ್​ ಲಾಂಚ್​ ಮಾಡುವ ಮೂಲಕ ಮದುವೆಯಾಗಲು ಸಿಂಗಲ್ಸ್​ಗೆ ದಾರಿ ಮಾಡಿಕೊಟ್ಟಿದೆ.

    ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಮೂಲಕ ಸದಾ ಮುಂದಿರುವ ದೇಶ ಎಂದರೆ ಮೊದಲಿಗೆ ಕೇಳಿ ಬರುವ ಹೆಸರು ಜಪಾನ್​. ಈ ದೇಶವು ವಿಶ್ವದಲ್ಲೇ ಅತಿ ಹೆಚ್ಚು ಶಾತಯುಷಿಗಳನ್ನು ಹೊಂದಿದ್ದು, ದೇಶದ ಜನಸಂಖ್ಯೆಯ ಶೇ. 28 ರಷ್ಟು 65 ಅಥವಾ ಅದಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ವರ್ಷ ಕಳೆದಂತೆ ಜನನ ಪ್ರಮಾಣ ಕುಸಿಯುತ್ತಿದ್ದು, ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹೊಸ ಯೋಜನೆ ಒಂದನ್ನು ರೂಪಿಸಿದೆ.

    ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಪಾನ್​ ಸರ್ಕಾರವು ಸಿಂಗಲ್ಸ್​​ಗಾಗಿ ವಿಶೇಷ ಡೇಟಿಂಗ್​ ಆ್ಯಪ್​ ಒಂದನ್ನು ಲಾಂಚ್​ ಮಾಡಿದೆ. ಸರ್ಕಾರವೇ ಡೇಟಿಂಗ್ ಹಾಗೂ ಲೈಂಗಿಕತೆಗೆ ಉತ್ತೇಜನ ನೀಡುತ್ತಿದೆಯಾ ಅನ್ನೋ ಗಂಭೀರ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ಈ ಪ್ರಶ್ನೆಗೆ ನೇರ ಉತ್ತರ ಹೌದು. ಆದರೆ ಡೇಟಿಂಗ್ ಆ್ಯಪ್‌ಗೆ ಕೆಲ ಪ್ರಮುಖ ಕಾರಣಗಳೂ ಇವೆ. ಜಪಾನ್‌ನಲ್ಲಿ ಜನನ ಪ್ರಮಾಣದಲ್ಲಿ ಭಾರಿ ಇಳಿಕೆಯಾಗುತ್ತಿದೆ. ಬಹುತೇಕರು ಸಿಂಗಲ್ ಆಗಿದ್ದುಕೊಂಡು ಕಾಳ ಕಳೆಯುತ್ತಿದ್ದಾರೆ. ಇದರಿಂದ ಪೋಷಕರಾಗುತ್ತಿಲ್ಲ, ಜನನ ಪ್ರಮಾಣದಲ್ಲಿನ ಭಾರಿ ಇಳಿಕೆ ತಪ್ಪಿಸಲು ಸರ್ಕಾರ ಮಹತ್ವದ ಡೇಟಿಂಗ್ ಆ್ಯಪ್ ಯೋಜನೆ ಜಾರಿ ಮಾಡಿದೆ.

    Love

    ಇದನ್ನೂ ಓದಿ: ಅಫ್ಘನ್​ ದಾಳಿಗೆ ತತ್ತರಿಸಿದ ಕಿವೀಸ್​; ನ್ಯೂಜಿಲೆಂಡ್​ ಎದುರು ಭರ್ಜರಿ ಜಯಗಳಿಸಿದ ರಶೀದ್​ ಪಡೆ

    See also  ದೇಶ ವಿರೋಧಿ ಚಟುವಟಿಕೆ; ಕೈ ಸರ್ಕಾರದ ವಿರುದ್ಧ ಮುತಾಲಿಕ್​ ವಾಗ್ದಾಳಿ

    ಈ ಕುರಿತು ಮಾತನಾಡಿರುವ ಟೋಕಿಯೋ ಸರ್ಕಾರದ ಮುಖ್ಯ ಕಾರ್ಯದರ್ಶಿ ಯೋಶಿಮಾಸಾ ಹಯಾಶಿ, ಇಳಿಯುತ್ತಿರುವ ಜನನ ಪ್ರಮಾಣವನ್ನು ಏರಿಕೆಯತ್ತ ಕೊಂಡೊಯ್ಯಲು ಟೋಕಿಯೋ ಫುಟಾರಿ ಸ್ಟೋರಿ ಹೆಸರಿನ ಡೇಟಿಂಗ್ ಅಪ್ಲಿಕೇಶನ್ ಜಾರಿಗೆ ತಂದಿದೆ. ಇದಲ್ಲದೆ ಮದುವೆಯಾಗಲು ಮತ್ತು ಮಗು ಹೊಂದಲು ಬಯಸುವವರಿಗೆ ಸರ್ಕಾರದಿಂದ ಹಣಕಾಸಿನ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಟೊಕಿಯೋ ಫ್ಯುಟರಿ ಸ್ಟೋರಿ ಎಂದು ಡೇಟಿಂಗ್​ ಆ್ಯಪ್​ಗೆ ಹೆಸರಿಡಲಾಗಿದ್ದು, ಸರ್ಕಾರ ದೊಡ್ಡ ಮಟ್ಟದಲ್ಲಿ ಜಾಹೀರಾತುಗಳನ್ನು ನೀಡುತ್ತಿದೆ. ಈ ಆ್ಯಪ್‌ನಲ್ಲಿ ಡೇಟಿಂಗ್ ಮಾಡಿ ಎಸ್ಕೇಪ್ ಆಗುವ ಆಯ್ಕೆಯಿಲ್ಲ. ಸಂಗಾತಿಯನ್ನು ಹುಡುಕಲು, ಪ್ರೀತಿಸಲು, ಡೇಟಿಂಗ್ ಬಳಿಕ ಮದುವೆ. ಡೇಟಿಂಗ್ ಮಾಡಿ ಅರ್ಧಕ್ಕೆ ಕೈಬಿಟ್ಟರೆ ಆ್ಯಪ್ ಡೇಟಾ ಆಧರಿಸಿ ಪ್ರಕರಣ ದಾಖಲಾಗಲಿದೆ. ಹೀಗಾಗಿ ಆ್ಯಪ್ ಇದೆ ಎಂದು ಸುಖಾಸುಮ್ಮನೆ ಡೇಟಿಂಗ್ ಮಾಡಿ ಹಾಯಾಗಿರುವ ಪ್ಲಾನ್ ಸಾಧ್ಯವಿಲ್ಲ. ನಿಮಗಿಷ್ಟವಾದವರನ್ನು ಹುಡುಕಿ ಪ್ರೀತಿಸಬಹುದು. ಇಬ್ಬರ ಗ್ರೀನ್ ಸಿಗ್ನಲ್ ಬಳಿಕ ಡೇಟಿಂಗ್, ಡೇಟಿಂಗ್ ಬಳಿಕ ಮದುವೆ. ಹೀಗಾಗಿ ಜಪಾನ್ ಡೇಟಿಂಗ್ ಆ್ಯಪ್‌ನಲ್ಲಿ ಕೆಲ ಎಚ್ಚರಿಕೆಯನ್ನು ತೆಗೆದುಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts