ಕಟೀಲು ನಂದಿನಿ ಗೋಶಾಲೆಯಲ್ಲಿ ಗೋಪೂಜೆ

New Project
Published on

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಂದಿನಿ ಗೋಶಾಲೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ದೀಪಾವಳಿ ಅಂಗವಾಗಿ ಸಾಮೂಹಿಕ ಗೋವುಗಳ ಸ್ವಚ್ಛತೆ ಹಾಗೂ ಗೋಪೂಜೆ ಶನಿವಾರ ನಡೆಯಿತು.

ಭಜನೆ, ಸಾಮೂಹಿಕ ಗಣಪತಿ ನಮಸ್ಕಾರ, ಸೂರ್ಯ ನಮಸ್ಕಾರ ಹಾಗೂ ವಿಷ್ಣು ನಮಸ್ಕಾರದ ಯೋಗಾಭ್ಯಾಸವನ್ನು ಗೋಶಾಲೆಯಲ್ಲಿ ನಡೆಸಲಾಯಿತು. ಕಟೀಲು ಶಾಲೆಯ ನಿವೃತ್ತ ಶಿಕ್ಷಕ ವಾಸುದೇವ ಶೆಣೈ, ಜಿಲ್ಲಾ ಸಂಯೋಜಕ ಕನಕ ಅಮೀನ್, ಜಿಲ್ಲಾ ಸಹ ಸಂಚಾಲಕ ಗಣೇಶ್, ನಗರ ಸಂಚಾಲಕ್ ಶ್ರೀನಿವಾಸ ಜೋಶಿ, ಆನಂದ, ಶ್ರೀನಿವಾಸ, ಈಶ್ವರ, ಹರೀಶ್, ಅನುಪಮ, ಮನೋಹರ್, ಜೀವನ್ ಪ್ರಸಾದ್, ಶೇಖರ್, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು. ದಾಮೋದರ ಅವರು ಗೋಪೂಜೆಯ ಮಹತ್ವದ ಕುರಿತು ಮಾಹಿತಿ ನೀಡಿದರು. ಕಟೀಲು ದೇವಸ್ಥಾನದ ಅರ್ಚಕ ಶ್ರೀನಿವಾಸ ಆಸ್ರಣ್ಣ ಗೋವಿನ ಮಹತ್ವ ವಿವರಿಸಿದರು.

ಕಾವೂರು ವಲಯದ 160 ಯೋಗಬಂಧುಗಳು ಭಾಗವಹಿಸಿದ್ದರು. ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಗುಣಪ್ರಭಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net