ಕೊರಗಜ್ಜ ಚಿತ್ರಕ್ಕೆ ಗೋಪಿ ಸಂಗೀತ; ಸುಧೀರ್ ಅತ್ತಾವರ್ ನಿರ್ದೇಶನದ ಸಿನಿಮಾ

koragajja
Published on

ಬೆಂಗಳೂರು: ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ‘ಕೊರಗಜ್ಜ’. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಿದು. ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರಅವರ ಜೀವನಾಧಾರಿತ ಚಿತ್ರವಾದ ‘ವಿಜಯಾನಂದ’, ‘ಬೆಂಗಳೂರು ಡೇಸ್’, ‘ಚಾರ್ಲಿ’, ‘ಉಸ್ತಾದ್ ಹೋಟೆಲ್’ ಸೇರಿ ಹಲವಾರು ಹಿಟ್ ಮಲಯಾಳಂ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಿಗೆ ಸಂಗೀತ ನೀಡಿರುವ ಖ್ಯಾತಿ ಹೊಂದಿರುವ ಸಂಗೀತ ಸಂಯೋಜಕ ಗೋಪಿ ಸುಂದರ್. ‘ಕೊರಗಜ್ಜ’ ಚಿತ್ರಕ್ಕೆ ಸಂಪೂರ್ಣ ಹಿನ್ನೆಲೆ ಸಂಗೀತ ಹಾಗೂ ಹಾಡುಗಳಿಗೆ ಮ್ಯೂಸಿಕ್ ನೀಡುತ್ತಿದ್ದಾರೆ.

ಸುಮಾರು 800 ವರ್ಷಗಳ ಹಿಂದಿನ ಕಥೆಯಾಧಾರಿತ ಚಿತ್ರ ಇದಾಗಿದ್ದು, ಬಿಗ್ ಬಜೆಟ್‌ನಲ್ಲಿ ತ್ರಿವಿಕ್ರಮ ಸಾಲ್ಯ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ‘ಪುಷ್ಪ’, ‘ಆ್ಯಂಟ್ ಮ್ಯಾನ್’, ‘ಟ್ರೂ ಸ್ಪಿರಿಟ್’, ‘ಆಕ್ವಮ್ಯಾನ್’ ಸೇರಿ ಹಲವು ಹಾಲಿವುಡ್ ಚಿತ್ರಗಳ ತಂತ್ರಜ್ಞರು ಭಾಗಿಯಾಗಿರುವುದು ವಿಶೇಷ.

ಹಲವು ಬಾಲಿವುಡ್ ಹಾಗೂ ಹಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ನಟ ಕಬೀರ್ ಬೇಡಿ, ಹೆಸರಾಂತ ನೃತ್ಯ ಸಂಯೋಜಕ ಸಂದೀಪ್ ಸೋಪರ್ಕರ್, ಶ್ರುತಿ, ಗಣೇಶ್ ಆಚಾರ್ಯ, ಭವ್ಯ ತಾರಾಗಣದಲ್ಲಿದ್ದಾರೆ. ‘ಕೊರಗಜ್ಜ’ನ ತಾಯಿ ‘ಕೊರೊಪೊಳು’ ಪಾತ್ರದ ಮೂಲಕ ಋತಿಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮಾರ್ಚ್ ಮಾಸಾಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net