

ಮುಂಬೈ: ಹಿಂದಿ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟ ಮನೋಜ್ ಬಾಜಪೇಯಿ, ಕಳೆದ ವರ್ಷ ಬಿಡುಗಡೆಗೊಂಡ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ಮೂಲಕ ಬಾಲಿವುಡ್ ಅಂಗಳದಲ್ಲಿ ಹೆಚ್ಚು ಸದ್ದು ಮಾಡಿದ್ದರು. ಇದೀಗ ತಮ್ಮ ಊಟದ ಪದ್ಧತಿ ಹಾಗೂ 14 ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಜೀವನ ಶೈಲಿ ಕುರಿತು ಇಲ್ಲಿಯವರೆಗೆ ಹೇಳದ ಸಂಗತಿಯೊಂದನ್ನು ಈಗ ಬಹಿರಂಗವಾಗಿ ತಿಳಿಸಿದ್ದಾರೆ.
ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಮನೋಜ್ ಬಾಜಪೇಯಿ, "ಕಳೆದ 14 ವರ್ಷಗಳಿಂದ ರಾತ್ರಿಯ ಹೊತ್ತು ಊಟವನ್ನು ತ್ಯಜಿಸಿರುವುದು ಉತ್ತಮ ಆಹಾರ ಕ್ರಮ ಮತ್ತು ಆ್ಯಬ್ಸ್ ಅನ್ನು ಕಾಪಾಡಿಕೊಳ್ಳಲು. ತೂಕ ಮತ್ತು ಅನಾರೋಗ್ಯಕ್ಕೆ ಬಂದಾಗ ಆಹಾರವು ಗಮನಾರ್ಹ ಅಪಾಯವನ್ನು ಉಂಟುಮಾಡುತ್ತದೆ. ರಾತ್ರಿಯ ಊಟದಿಂದ ದೂರವಿರುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು" ಎಂದಿದ್ದಾರೆ.
"ತೂಕ ಮತ್ತು ಅನಾರೋಗ್ಯದ ವಿಚಾರದಲ್ಲಿ ಆಹಾರವೇ ದೊಡ್ಡ ಶತ್ರು. ನೀವು ರಾತ್ರಿಯ ಊಟವನ್ನು ತ್ಯಜಿಸಿದಾಗ ಹಲವು ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುತ್ತೀರಿ. ನಾನು ಆಹಾರ ಸೇವನೆಯನ್ನು ಕಡಿಮೆ ಮಾಡಿದ್ದೇನೆ. ಯಾಕಿರಬಹುದು ಎಂದು ನೀವು ಆಶ್ಚರ್ಯ ಪಡ್ತೀರಿ? ಅದಕ್ಕೆ ಕಾರಣ ನಾನು ಹೊಂದಿರುವ ಊಟವು ಅದ್ಭುತವಾಗಿದೆ. ನನ್ನ ಫುಡ್ನಲ್ಲಿ ಅನ್ನ, ರೊಟ್ಟಿ ಮತ್ತು ನನ್ನ ನೆಚ್ಚಿನ ಸಸ್ಯಾಹಾರಿ ಅಥವಾ ಮಾಂಸಾಹಾರಿ ಖಾದ್ಯವಿರುತ್ತದೆ" ಎಂದು ಹೇಳಿದ್ದಾರೆ.
ಈ ವಿಧಾನವು ಸಮತೋಲಿತ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಮನೋಜ್ ತಿಳಿಸಿದ್ದು, ನಿಯಮಿತ ವ್ಯಾಯಾಮ ಯೋಗ ಮತ್ತು ಧ್ಯಾನ ಮಾನಸಿಕ ಆರೋಗ್ಯದ ಮಹತ್ವವನ್ನು ನೀಡುತ್ತದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).