ಹೆಬ್ರಿಯಲ್ಲಿ ಗೋಪಾಲ ಭಂಡಾರಿ ಪುಣ್ಯಸ್ಮರಣೆ

hbr
ಎಚ್.ಗೋಪಾಲ ಭಂಡಾರಿಯವರ 6ನೇ ಪುಣ್ಯ ಸ್ಮರಣೆ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಗೋಪಾಲ ಭಂಡಾರಿ ಅವರು ಜನಸಾಮಾನ್ಯರ ನಾಯಕ. ಸದಾ ಬಡವರ ಬಗ್ಗೆ ಚಿಂತನೆ ಹೊಂದಿದ್ದರು. ಅವರಂತಹ ಆದರ್ಶ ರಾಜಕೀಯ ನೇತಾರರನ್ನು ಬೇಗನೆ ಕಳೆದುಕೊಂಡಿದ್ದೇವೆ. ಅವರು ಇಲ್ಲದಿದ್ದರೂ ಅವರ ಆದರ್ಶಗಳು ನಮಗೆ ಸದಾ ದಾರಿದೀಪ ಎಂದು ಕಾಂಗ್ರೆಸ್ ಮುಖಂಡ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಹೆಬ್ರಿ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ, ಮಾಜಿ ಶಾಸಕ ದಿ.ಎಚ್.ಗೋಪಾಲ ಭಂಡಾರಿಯವರ 6ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿದರು.

ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಹಿರಿಯರಾದ ಶೀನ ಪೂಜಾರಿ, ಹೆಬ್ರಿ ಗ್ರಾಪಂ ಸದಸ್ಯರಾದ ಎಚ್.ಜನಾರ್ದನ್, ಕನ್ಯಾನ ಸಂತೋಷ ನಾಯಕ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್, ವಿವಿಧ ಪ್ರಮುಖರಾದ ಗಣೇಶ ಶೇರಿಗಾರ್ ಹೆಬ್ರಿ, ಮುದ್ರಾಡಿ ಶಶಿಕಲಾ ಪೂಜಾರಿ, ಕರ್ಜೆ ವಿಠ್ಠಲ ಪೂಜಾರಿ, ಚಾರ ಗಾಯತ್ರಿ ಆಚಾರ್, ಗಣೇಶ್ ಹೆಬ್ರಿ, ಸುಧಾಕರ ಶೆಟ್ಟಿ ಹೆಬ್ರಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net