ಗುಂಡಿಗಳಲ್ಲಿ ಸವಾರರ ಸರ್ಕಸ್

shirva hadagetta raste..
shirva hadagetta raste..
Published on

ಹರಿಪ್ರಸಾದ್ ನಂದಳಿಕೆ ಶಿರ್ವ ಪಂಜಿವಾರು ಕೋಡುಗುಡ್ಡೆಯಿಂದ ಪಿಲಾರುಖಾನ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರು ನಿತ್ಯ ಸಂಕಟ ಅನುಭವಿಸುವಂತಾಗಿದೆ. ಹೊಂಡಗುಂಡಿಯಿಂದ ಕೂಡಿರುವ ರಸ್ತೆಯಲ್ಲಿ ಸರ್ಕಸ್ ವಾಡಿಕೊಂಡು ವಾಹನ ಚಲಾಯಿಸಿ ಅಪಘಾತಕ್ಕೂ ಕಾರಣವಾಗುತ್ತಿದೆ. ಮಳೆಗಾಲಕ್ಕೂ ಮುನ್ನ ಕಟಪಾಡಿಯಿಂದ ಬಂಟಕಲ್ಲು ವರೆಗೆ ರಸ್ತೆ ಹೊಂಡ ಮುಚ್ಚಲಾಗಿತ್ತು. ಆದರೆ ಪಂಜಿವಾರು ಕೋಡುಗುಡ್ಡೆಯಿಂದ ಪಿಲಾರುಖಾನದ ವರೆಗೆ ರಸ್ತೆ ತೀರ ಹದಗೆಟ್ಟಿದೆ. ರಸ್ತೆಯ ಡಾಂಬರು ಎದ್ದು ಬೃಹತ್ ಗಾತ್ರದ ಹೊಂಡ ನಿರ್ವಾಣವಾಗಿದ್ದು, ಮಳೆ ನೀರು ನಿಂತು ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಕಳೆದ ಹದಿನೈದು ವರ್ಷಗಳಿಂದ ಕೋಡುಗುಡ್ಡೆ ಪಂಜಿವಾರು ಪಾಲಮೆ ಕ್ರಾಸ್‌ಗಣಪತಿ ದೇವಳದವರೆಗಿನ ರಸ್ತೆಗೆ ತೇಪೆ ಕಾರ್ಯ ಹೊರತು ಪಡಿಸಿ ಪೂರ್ಣ ಪ್ರವಾಣದಲ್ಲಿ ಡಾಮರೀಕರಣಗೊಂಡಿಲ್ಲ. ಈ ನಡುವೆ ಕೋಡುಗುಡ್ಡೆ ಪಂಜಿವಾರು ಸಮೀಪ ಮೋರಿ ನಿರ್ವಾಣ ಕಾರ್ಯ ಪ್ರಾರಂಭಗೊಂಡು ಆಮೆಗತಿಯಲ್ಲಿ ಸಾಗಿತ್ತು. ಅಂದಾಜು 50 ಮೀಟರ್ ರಸ್ತೆ ಅಗಲೀಕರಣದೊಂದಿಗೆ ದುರಸ್ತಿ ಕಂಡಿದ್ದು, ಈ ರಸ್ತೆಯಲ್ಲೂ ಈಗ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಕಾಮಗಾರಿಯ ಗುಣಮಟ್ಟಕ್ಕೆ ಸಾಕ್ಷಿಯಾದಂತಿದೆ. ಕೋಡುಗುಡ್ಡೆ ಸಮೀಪ ನಿರ್ವಾಣಗೊಂಡ ಅವೈಜ್ಞಾನಿಕ ಮೋರಿಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಲೋಕೋಪಯೋಗಿ ಇಲಾಖೆ ತೇಪೆ ಕಾರ್ಯ ವಾಡಿದ್ದರೂ ಅದು ಮಳೆಗೆ ಕೊಚ್ಚಿಕೊಂಡು ಹೋಗಿದೆ.

ಸಂಪರ್ಕ ಬೆಸೆಯುವ ಪ್ರಮುಖ ಹೆದ್ದಾರಿ

ರಾಷ್ಟ್ರೀಯ ಹೆದ್ದಾರಿ ಕಟಪಾಡಿಯಿಂದ ಸಂಪರ್ಕ ಪಡೆಯುವ ರಾಜ್ಯ ಹೆದ್ದಾರಿಯಾಗಿದ್ದು, ಇಲ್ಲಿ ನಿತ್ಯ ನೂರಾರು ವಾಹನಗಳ ಓಡಾಟವಿದೆ. ಇದೇ ರಸ್ತೆಯನ್ನು ಬಳಸಿಕೊಂಡು ಉಡುಪಿ, ಕುಂದಾಪುರ ಸೇರಿದಂತೆ ಹಲವು ಭಾಗದ ಪ್ರಯಾಣಿಕರು ಈ ಮಾರ್ಗದ ಮೂಲಕವೇ ಸಾಗುತ್ತಾರೆ. ಪ್ರವಾಸಿಗರ ವಾಹನಗಳು ಕೂಡ ಕಟೀಲು, ಕಾರ್ಕಳ, ಉಡುಪಿ ಸೇರಿದಂತೆ ನಾನಾ ಕಡೆಗಳಿಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದು, ತೀರಾ ಹದಗೆಟ್ಟ ರಸ್ತೆಯಿಂದ ಸಮಸ್ಯೆ ಎದುರಿಸುವಂತಾಗಿದೆ. ಹೊಂಡಗುಂಡಿಗಳನ್ನು ತಪ್ಪಿಸುವ ಭರದಲ್ಲಿ ವಾಹನಗಳ ನಡುವೆ ಅಪಘಾತಗಳು ನಡೆದು ಹೊಡೆದಾಟದ ಪ್ರಕರಣವೂ ನಡೆದಿದೆ. ಆಯತಪ್ಪಿ ಹೊಂಡಕ್ಕೆ ಬಿದ್ದು ಆಸ್ಪತ್ರೆಗೆ ಸೇರಿದ ನಿದರ್ಶನವೂ ಇದೆ.

ಇಲ್ಲಿನ ರಸ್ತೆ ಸಮಸ್ಯೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಹೊಂಡಗುಂಡಿಯಲ್ಲೇ ಸಂಚರಿಸಬೇಕಾದ ಅನಿವಾರ್ಯ ಸ್ಥಿತಿಯಿದೆ. ಬೇಸಿಗೆಯಲ್ಲಿ ತೇಪೆ ಹಾಕುತ್ತಾರೆ ಬಳಿಕ ಮೊದಲ ಮಳೆಗೆ ಮತ್ತೆ ಹೊಂಡ ನಿರ್ವಾಣವಾಗುತ್ತದೆ. ಸಮಸ್ಯೆಗೆ ಶಾಶ್ವತ ಮುಕ್ತಿ ಇಲ್ಲಿವರೆಗೂ ಸಿಕ್ಕಿಲ್ಲ. ಸತೀಶ್, ಗ್ರಾಮಸ್ಥರು. ರಸ್ತೆಯುದ್ದಕ್ಕೂ ಹೊಂಡಗುಂಡಿಗಳಿದ್ದು ಅಪಘಾತಕ್ಕೂ ಕಾರಣವಾಗುತ್ತಿದೆ. ಅನೇಕ ಸವಾರರು ಬಿದ್ದು ಗಾಯಗೊಂಡಿದ್ದಾರೆ. ತೇಪೆ ಹಾಕುವುದು ಬಿಡಿ ಕಲ್ಲು ಮಣ್ಣು ಹಾಕಿಯಾದರೂ ಹೊಂಡವನ್ನು ಮುಚ್ಚಲು ಅಧಿಕಾರಿಗಳಿಗೆ ಪುರ್ಸೊತ್ತಿಲ್ಲ. ದಿನೇಶ್ ಕುವಾರ್, ವಾಹನ ಸವಾರ https://www.vijayavani.net/kaivalyashri-chaturmasya-at-mumbai-valikeshwar-branch-of-the-math https://www.vijayavani.net/guarantee-scheme-implementation-committee-meeting-2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net