

ನವದೆಹಲಿ: ಭಾರತದ ಮೊದಲ ವೈದ್ಯೆಯ 160ನೇ ಜನ್ಮದಿನಾಚರಣೆ ಪ್ರಯುಕ್ತ ಇಂದು ಡೂಡಲ್ ಮೂಲಕ ಗೂಗಲ್ ನಮನ ಸಲ್ಲಿಸಿದೆ. ಡಾ.ಕಾದಂಬಿನಿ ಗಂಗೂಲಿ ಅವರ ಚಿತ್ರದೊಂದಿಗೆ ಗೂಗಲ್ ತನ್ನ ಸರ್ಚ್ನ ಹೋಮ್ ಪೇಜ್ನಲ್ಲಿ ಡೂಡಲ್ ಆಗಿಸಿ ಅವರನ್ನು ನೆನಪಿಸಿಕೊಂಡಿದೆ. ಇದರಲ್ಲಿ ಕೋಲ್ಕತ ಮೆಡಿಕಲ್ ಕಾಲೇಜ್ ಆ್ಯಂಡ್ ಹಾಸ್ಪಿಟಲ್ನ ಚಿತ್ರವನ್ನೂ ಹಿನ್ನೆಲೆಯಾಗಿಸಿ ಇಡಲಾಗಿದೆ.
ಕಾದಂಬಿನಿ ಗಂಗೂಲಿ 1861ರ ಜುಲೈ 18ರಂದು ಜನಿಸಿದ್ದು, ಚಂದ್ರಮುಖಿ ಬಸು ಎಂಬವರೊಂದಿಗೆ ಪದವಿ ಪಡೆದಿದ್ದ ಇವರು ದೇಶದ ಮೊದಲ ಮಹಿಳಾ ಪದವೀಧರೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಇವರು ಕೋಲ್ಕತದ ಬೆಥ್ಯೂನ್ ಕಾಲೇಜ್ನಲ್ಲಿ ಪದವಿ ಪಡೆದಿದ್ದರು.