

Gold Price: ನಿರಂತರವಾಗಿ ಕಳೆದ ವಾರ ಪೂರ್ತಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಏರಿಕೆಯ ಹಾದಿಯಲ್ಲಿತ್ತು. ಇದೀಗ ಆಗಸ್ಟ್ 11ರ ಸೋಮವಾರದ ಕೊನೆಗೆ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದೆ. ಗೌರಿ-ಗಣೇಶ ಹಬ್ಬ ಸಮೀಪಿಸುತ್ತಿದ್ದು, ಈ ಹಬ್ಬ ಕೂಡ ಮಹಿಳೆಯರಿಗೆ ವಿಶೇಷವಾಗಿರುವುದರಿಂದ ಚಿನ್ನ ಖರೀದಿ ಜೋರಾಗಿಯೇ ಇರುತ್ತದೆ. ಈ ನಡುವೆ ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ದಿಢೀರ್ 760 ರೂಪಾಯಿ ಇಳಿಕೆಯಾಗಿದೆ. ಆಗಸ್ಟ್ 8 ರವರೆಗೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಆದರೆ ಇದೀಗ ಗೋಲ್ಡ್ ರೇಟ್ನಲ್ಲಿ ಇಳಿಕೆ ಕಂಡುಬಂದಿದೆ.
ಭಾರತದ ಮೇಲೆ ಅಮೆರಿಕದ ಡೊನಾಲ್ಡ್ ಟ್ರಂಪ್ 50% ಸುಂಕ ಹೆಚ್ಚಳ ಮಾಡಿದ ಬೆನ್ನಲ್ಲೇ ಚಿನ್ನದ ಬೆಲೆ ಭಾರೀ ಏರಿಕೆಯಾಗಿತ್ತು. ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಿದ್ದರಿಂದ ಗೋಲ್ಡ್ ಬೆಲೆ ಭಾರಿ ಹೆಚ್ಚಳ ಆಗಿತ್ತು. ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಳಿತ ಉಂಟಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ಆಗಿದೆ. ಪ್ರತಿ ಗ್ರಾಂ ಚಿನ್ನದ ಬೆಲೆಯು 9,375 ರೂಪಾಯಿ ಆಗಿದ್ದು. 10 ಗ್ರಾಂಗೆ 93,750 ರೂಪಾಯಿ ಆಗಿದೆ. ವಾರಾಂತ್ಯಕ್ಕೆ ಹೋಲಿಕೆ ಮಾಡಿದರೆ 1 ಗ್ರಾಂ ಚಿನ್ನದ ಬೆಲೆ 70 ರೂಪಾಯಿ ಹಾಗೂ 10 ಗ್ರಾಂಗೆ 700 ರೂಪಾಯಿ ಇಳಿಕೆ ಆಗಿದೆ. ಇನ್ನೂ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಇದರ ಬೆಲೆ ರೂ. 9,375 ರೂ. 9,375, ರೂ. 9,375 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ 9,390 ರೂ. ಚಿನ್ನದ ಬೆಲೆ ಇದೆ.
ಬೆಂಗಳೂರಿನಲ್ಲಿ ಇಂದು 18 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 7,671 ರೂಪಾಯಿ ಆಗಿದೆ. ಪ್ರತಿ 10 ಗ್ರಾಂಗೆ 76,710 ರೂಪಾಯಿ ಇದೆ. ನಿನ್ನೆಗೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂ ಚಿನ್ನದ ಬೆಲೆಯು 57 ರೂಪಾಯಿ ಹಾಗೂ 10 ಗ್ರಾಂನ ಚಿನ್ನದ ಬೆಲೆಯು ಬರೋಬ್ಬರಿ 570 ರೂಪಾಯಿ ಕಡಿಮೆಯಾಗಿದೆ.
ಬೆಳ್ಳಿ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡಿದೆ. ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ. 1,17,000 ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 1,170, ರೂ. 11,700 ಹಾಗೂ ರೂ. 1,17,000 ಗಳಾಗಿವೆ.