ಮಧೂರು: ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಉತ್ತಮ ಸಂಸ್ಕಾರ ಮತ್ತು ಶಿಸ್ತು ರೂಢಿಸಿಕೊಳ್ಳಬೇಕು ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಸದಸ್ಯ ನೀರಾಳ ಕೃಷ್ಣ ಹೊಳ್ಳ ಅಭಿಪ್ರಾಯಪಟ್ಟರು.
ಕೂಟ ಮಹಾ ಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗ ಸಂಸ್ಥೆಯ ವತಿಯಿಂದ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಮಾಯಿಪ್ಪಾಡಿಯ ಮಜಲು ಮನೆಯಲ್ಲಿ ನಡೆದ ಸಂಪರ್ಕ ಸಭೆಯ ಅಧ್ಯಕ್ಷತೆಯನ್ನು ಅಂಗಸಂಸ್ಥೆಯ ಅಧ್ಯಕ್ಷ ಶಂಕರನಾರಾಯಣ ಮಯ್ಯ ಬದಿಯಡ್ಕ ವಹಿಸಿದ್ದರು. ತುಂಗ ರವಿಶಂಕರ ಭಟ್, ಲಕ್ಷ್ಮಿ ತುಂಗ, ಎ.ವಾಸುದೇವ ಹೊಳ್ಳ ಎಲ್ಲಂಗಳ, ಎಂ.ನರಸಿಂಹ ರಾಜ್ ಪುತ್ತಿಗೆ, ಶಂಕರ ನಾವಡ, ವರ್ಕಾಡಿ ಅಂಗಸಂಸ್ಥೆಯ ಕಾರ್ಯದರ್ಶಿ ನರಸಿಂಹ ಮಯ್ಯ ಎಂ.ಮಧೂರು ಉಪಸ್ಥಿತರಿದ್ದರು.
ಶ್ರೀಕೃಷ್ಣ ಹಂದೆ ಎಡನೀರು, ಸಿಂಚನಾ ಹೊಳ್ಳ ಎಲ್ಲಂಗಳ, ಸ್ಮಿತಾ ಎ.ಎಲ್ಲಂಗಳ ಅವರನ್ನು ಅಭಿನಂದಿಸಲಾಯಿತು. ಗೋಪಾಲಕೃಷ್ಣ ತುಂಗ ಸ್ವಾಗತಿಸಿದರು. ಕೃಷ್ಣ ಕಾರಂತ ಬನ್ನೂರು ವಂದಿಸಿದರು.