ನೂತನ ಮೇಲ್ವಿಚಾರಕರಿಗೆ ಅಧಿಕಾರ ಹಸ್ತಾಂತರ

Kdb_Dharmastala
Published on

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ವಲಯದ ನೂತನ ಮೇಲ್ವಿಚಾರಕರಾಗಿ ಆಗಮಿಸಿರುವ ವಿಜೇಶ್ ಜೈನ್ ಅವರಿಗೆ ನಿಕಟಪೂರ್ವ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಅವರು ಕಡಬ ಯೋಜನಾ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು.

ಪ್ರಗತಿಬಂಧು ಸ್ವಸಹಾಯ ಸಂಘ ಕಡಬ ವಲಯ ಒಕ್ಕೂಟ ಅಧ್ಯಕ್ಷ ರಮೇಶ್ ರೈ ಅರ್ಪಾಜೆ, ಸಂರಕ್ಷಣಾ ವೇದಿಕೆ ವಲಯಾಧ್ಯಕ್ಷ ಆಪೀಕ್ ಕೇಪು, ಭಜನಾ ಪರಿಷತ್ ವಲಯಾಧ್ಯಕ್ಷ ರಮೇಶ್ ಗೌಡ, ಶೌರ್ಯ ಘಟಕ ಪ್ರತಿನಿಧಿ ಪ್ರಶಾಂತ್ ಎನ್ ಎಸ್, ವಲಯ ಒಕ್ಕೂಟ ಅಧ್ಯಕ್ಷರಾದ ಜಯಾನಂದ ರೆಂಜಿಲಾಡಿ, ನಳಿನಿ ರೈ ಕಡಬ, ನಾಗಣ್ಣ ಗೌಡ ಕುಟ್ರುಪ್ಪಾಡಿ, ಸುಧೀಶ್ ಕುಮಾರ್ ನೂಜಿಬಾಳ್ತಿಲ, ಕಾಂತಪ್ಪಗೌಡ ದೊಡ್ಡಕೊಪ್ಪ, ರಝೀಯಾ ರಾಮನಗರ, ದೇವಣ್ಣ ಗೌಡ ಅಡ್ಡಗದ್ದೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net