

Astrology: ಜ್ಯೋತಿಷ್ಯದ ದೃಷ್ಟಿಕೋನದಲ್ಲಿ ನವೆಂಬರ್ ತಿಂಗಳು ಬಹಳ ವಿಶೇಷವಾಗಿರುತ್ತದೆ ಎಂದು ನಂಬಲಾಗುತ್ತದೆ. ಈ ತಿಂಗಳಲ್ಲಿ ಪ್ರಮುಖ ಗ್ರಹಗಳ ದಿಕ್ಕುಗಳ ಚಲನೆಗಳು ಬದಲಾಗುತ್ತಿರುತ್ತವೆ. ಈ ದಿನಗಳಲ್ಲಿ ಈ ಮೂರು ರಾಶಿ ಚಕ್ರದವರಿಗೆ ಅನೇಕ ರೀತಿಯ ಪ್ರಯೋಜನ ಬೀರಲಿದೆ ಎಂದು ತಿಳಿಸಿದೆ. ಹಾಗಿದ್ದರೆ ಆ 3 ರಾಶಿಗಳು ಯಾವುದು? ಅದರ ಮೇಲೆ ಬೀರುವ ಪರಿಣಾಮಗಳೇನು? ತಿಳಿಯೋಣ ಬನ್ನಿ..
ಈ ತಿಂಗಳು ತುಲಾ ರಾಶಿಯವರಿಗೆ ಹೊಸ ಆರಂಭದ ಸಂದೇಶವನ್ನು ತರುತ್ತದೆ ಎಂದು ನಂಬಲಾಗಿದೆ. ಗ್ರಹ ಸಂಚಾರದಿಂದ ನೀವು ಮಾಡುವ ಕೆಲಸಗಳಲ್ಲಿ ಮುನ್ನಣೆ ಸಾಧಿಸುತ್ತೀರಿ. ದೀರ್ಘಕಾಲದಿಂದ ಮಾಡುತ್ತಿರುವಂತಹ ಯೋಜನೆಗಳು ಲಾಭವನ್ನು ನೀಡುತ್ತವೆ. ಕುಟುಂಬದಲ್ಲಿ ಸಂತೋಷ, ನೆಮ್ಮದಿ, ಆತ್ಮವಿಶ್ವಾಸ ಒಟ್ಟಾರೆಯಾಗಿ ಎಲ್ಲವೂ ಸುಧಾರಣೆಗೊಳ್ಳುತ್ತವೆ.
ಈ ರಾಶಿಯವರಿಗೆ ಎಲ್ಲಾ ಗ್ರಹಗಳ ಸಂಚಾರವು ಶುಭವೆಂದು ಪರಿಗಣಿಸಲಾಗುತ್ತದೆ. ಈ ಸಂಚಾರವು ನಿಮ್ಮನ್ನು ಆಕರ್ಷಕವಾಗಿರುವಂತೆ ಮಾಡುತ್ತದೆ. ಕಲೆ, ಮಾಧ್ಯಮ, ಸೌಂದರ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ ಸುಖ, ನೆಮ್ಮದಿ ಸಿಗುತ್ತದೆ. ಈ ಅವಧಿಯಲ್ಲಿ ಆರ್ಥಿಕವಾಗಿ ಬಲವಾಗಿರುತ್ತದೆ. ಜನರಿಂದ ಬೆಂಬಲ ದೊರೆಯುತ್ತದೆ ಎಂದು ತಿಳಿಸಲಾಗಿದೆ.
ಕುಂಭ ರಾಶಿಯವರಿಗೆ ನವೆಂಬರ್‌ನಲ್ಲಿ ಸಂಭವಿಸುವ ಗ್ರಹ ಬದಲಾವಣೆಗಳು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅವು ಈ ರಾಶಿಯವರಿಗೆ ಹೊಸ ಅವಕಾಶಗಳನ್ನು ನೀಡುತ್ತದೆ. ಒಂದು ಪ್ರಮುಖ ವೃತ್ತಿಜೀವನದ ನಿರ್ಧಾರವು ನಿಮ್ಮ ಪರವಾಗಿರಲಿದ್ದು, ನೀವು ದೀರ್ಘಕಾಲದಿಂದ ಶ್ರಮಿಸುತ್ತಿರುವ ಕೆಲಸಗಳಿಗೆ ತಕ್ಕ ಪರಿಶ್ರಮ ಸಿಗುತ್ತದೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ ಮತ್ತು ನಿಮ್ಮ ಮಾನಸಿಕ ಸ್ಥಿರತೆಯೂ ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯ ತಿಳಿಸಿದೆ. (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.