More

    ಆಭರಣ ಖರೀದಿಸುವ ಯೋಚನೆ ಇದ್ದರೆ ಬೆಲೆ ಗಮನಿಸಿ; ಇಂದು ಚಿನ್ನ, ಬೆಳ್ಳಿ ದರ ಏರಿಕೆ

    ಬೆಂಗಳೂರು: ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ..

    ಚಿನ್ನದ ಮೇಲಿನ ಹೂಡಿಕೆ ಆಕರ್ಷಣೆಯೂ ಹೆಚ್ಚಾಗುತ್ತಿದೆ. ಚಿನ್ನಾಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ಚಿನ್ನ ಹಾಗೂ ಬೆಳ್ಳಿ ದರದ ಪ್ರತಿನಿತ್ಯದ ಮಾಹಿತಿ ಇಲ್ಲಿ ನೀಡಲಾಗಿದೆ.

    ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :
    22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,400 ರೂ.
    24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60.440 ರೂ.
    ಬೆಳ್ಳಿ ಬೆಲೆ 1 ಕೆಜಿ: 71,500 ರೂ.

    ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 54,000 ರೂಪಾಯಿ ಇತ್ತು. ಆದರೆ ಇಂದು 55,400 ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆ ಗಿಂತ 1400 ರೂಪಾಯಿ ಏರಿಕೆಯಾಗಿದೆ.
    ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 58.910 ರೂಪಾಯಿ ಇತ್ತು. ಆದರೆ ಇಂದು 60.440ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆ ಗಿಂತ 1530 ರೂಪಾಯಿ ಏರಿಕೆಯಾಗಿದೆ.

    ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):
    ಬೆಂಗಳೂರು: 55,400 ರೂ.
    ಮುಂಬೈ: 55,400 ರೂ.
    ದೆಹಲಿ: 55,550 ರೂ.
    ಕೇರಳ: 55,400 ರೂ.

    ಇಂದಿನ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಬಂದಿದೆ. ಚಿನ್ನಾಭರಣ ಪ್ರಿಯರು ಹಾಗೂ ಚಿನ್ನಾಭರಣದ ಮೇಲೆ ಹೂಡಿಕೆ ಮಾಡುವವರು ಪ್ರತಿನಿತ್ಯದ ಚಿನ್ನದ ಬೆಲೆಯ ವಿವರಗಳಿಗಾಗಿ ಈ ಸುದ್ದಿ ಓದಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts