ಆರ್ನೊನ್ ಡಿಆಲ್ಮೇಡಾಗೆ ಚಿನ್ನದ ಪದಕ

arnon
ಆರ್ನೋನ್
Published on

ಗಂಗೊಳ್ಳಿ: ಶಿವಮೊಗ್ಗ ಎ.ಜಡ್ ಮಾರಿಟೆಯೆಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ಆಶ್ರಯದಲ್ಲಿ ಶಿವಮೊಗ್ಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್‌ಷಿಪ್ 10 ರಿಂದ 11 ವರ್ಷದ ವಯೋಮಿತಿಯಲ್ಲಿ ಕಟಾ, ಕುಮಿಟೆ ವಿಭಾಗದಲ್ಲಿ ಕುಂದಾಪುರ ಆರ್ನೊನ್ ಡಿಆಲ್ಮೇಡಾ ಚಿನ್ನದ ಪದಕ ಪಡೆದುಕೊಂಡಿದ್ದಾನೆ. ಈತ ಕುಂದಾಪುರ ನಿವಾಸಿ ವಿಲ್ಸನ್, ಜ್ಯೋತಿ ಡಿಆಲ್ಮೇಡಾ ದಂಪತಿ ಪುತ್ರ. ಕೀಯೋಷಿ ಕಿರಣ್ ಕುಂದಾಪುರ, ರೆನ್ಸಿ ಸಂದೀಪ್ ವಿ.ಕಿರಣ್, ಸೇನ್ ಸಾಹಿ ಸಿಹಾನ್, ಶೇಕ್ ಸೇನ್ ಸಾಹಿ ಶಶಾಂಕ್ ತರಬೇತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net