ಹೆಬ್ರಿ: ಶಿಕ್ಷಣದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯನ್ನು ಸಮನಾಗಿ ಅಳವಡಿಸಿಕೊಳ್ಳಬೇಕು ಎಂದು ಅಮೃತ ಭಾರತಿ ಟ್ರಸ್ಟಿ ಸುಧೀರ್ ನಾಯಕ್ ಹೇಳಿದರು. ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ವಸತಿ ನಿಲಯದ ಸಭಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಜಿಲ್ಲಾಮಟ್ಟದ ಗುಂಪು ಆಟಗಳ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಅಮೃತ ಭಾರತಿ ಟ್ರಸ್ಟಿ ಕಾರ್ಯದರ್ಶಿ ಗುರುದಾಸ ಶೆಣೈ, ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ ಸ್ಪರ್ಧೆಗೆ ಚಾಲನೆ ನೀಡಿದರು. ವಿದ್ಯಾ ಕೇಂದ್ರದ ಪ್ರಾಂಶುಪಾಲ ಅರುಣ್ ಕುಮಾರ್, ಮುಖ್ಯಶಿಕ್ಷಕರಾದ ಅನಿತಾ, ಅಪರ್ಣಾ, ಶಕುಂತಳಾ, ಜಿಲ್ಲಾ ಸಮಿತಿ ಶಾರೀರಿಕ ಪ್ರಮುಖ್ ವಿಜಯ ಕುಮಾರ್ ಶೆಟ್ಟಿ, ಕ್ರೀಡಾಕೂಟ ಪ್ರಮುಖ್ ಉಷಾ ಶೆಟ್ಟಿ, ಶಿಕ್ಷಕ ರವೀಂದ್ರ ಶೆಟ್ಟಿ, ಅಮೃತ ಭಾರತಿ ಸಂಸ್ಥೆ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ್ ಹೆಗ್ಡೆ, ನಿಶಾನ್ ಕುಮಾರ್ ಶೆಟ್ಟಿ, ಪಾವನಾ, ವಿವಿಧ ಶಾಲೆ ದೈಹಿಕ ಶಿಕ್ಷಣ ಶಿಕ್ಷಕರಾದ ಪೂರ್ಣಿಮಾ, ಸಂತೋಷ್ ಖಾರ್ವಿ ಇದ್ದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು.