VIDEO: ಯಡಿಯೂರು ಸ್ವಾಮಿಗೆ 10 ಕೋಟಿ ರೂ.ಮೌಲ್ಯದ ಚಿನ್ನದ ರಥ ಅರ್ಪಿಸಿದ ಬಂಗಾರದಂಥ ಭಕ್ತ ...

Siddalingeshwara
Published on

ಬೆಂಗಳೂರು: ಭಕ್ತರು ದೇವರ ಬಳಿ ಏನಾದರೂ ಬೇಡಿಕೊಂಡು, ಅದಕ್ಕಾಗಿ ಹರಕೆ ಹೊರುವುದು, ಅದನ್ನು ತೀರಿಸುವುದು ಸಾಮಾನ್ಯ.

ಆದರೆ ಇಲ್ಲೋರ್ವ ನಿವೃತ್ತ ಬಸ್​ ಕಂಡಕ್ಟರ್​ ದೇವರು ಕೊಟ್ಟಿದ್ದನ್ನು ದೇವರಿಗೇ ಅರ್ಪಿಸಬೇಕು ಎಂಬ ಭಾವನೆಯಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಚಿನ್ನದ ರಥವನ್ನು ತುಮಕೂರಿನ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿಗೆ ಕೊಟ್ಟು, ಮಹಾನ್​ ಭಕ್ತರೆನಿಸಿಕೊಂಡಿದ್ದಾರೆ.

ಕುಣಿಗಲ್​ ಮೂಲದ ಬೆಂಗಳೂರು ನಿವಾಸಿ ಶಿವಕುಮಾರ್​ ನಿವೃತ್ತ ಕಂಡಕ್ಟರ್​. ಇವರು ಮೊದಲಿನಿಂದಲೂ ಸಿದ್ಧಲಿಂಗೇಶ್ವರನ ಭಕ್ತರು. ಶಿವಕುಮಾರ್​ ಅತ್ಯಂತ ಬಡಕುಟುಂಬದಿಂದ ಬಂದವರು. ಬಡತನದಿಂದ ಜೀವನ ನಡೆಸುವುದು ಕಷ್ಟವೆನಿಸಿದ ಕಾಲದಲ್ಲಿ ಯಡಿಯೂರಿಗೆ ಹೋಗಿ ದೇವರ ಬಳಿ ನನಗೆ ಉತ್ತಮ ಜೀವನ ಕೊಡು ಎಂದು ಭಕ್ತಿಯಿಂದ ಬೇಡಿಕೊಂಡಿದ್ದರಂತೆ. ಕೆಲವು ಕಾಲಗಳ ಬಳಿಕ ಅವರ ಬದುಕು ಉತ್ತಮ ಸ್ಥಿತಿಗೆ ತಲುಪಿತು. ಮೊದಲು ಕಂಡಕ್ಟರ್ ಆಗಿ ಸೇವೆ ಸಲ್ಲಿಸಿ, ನಂತರ ರಿಯಲ್​ ಎಸ್ಟೇಟ್​ ಉದ್ಯಮಕ್ಕೆ ಕೈಹಾಕಿ ಅಲ್ಲಿಯೂ ಯಶಸ್ವಿಯಾಗಿದ್ದರು. ಆಸ್ತಿ, ಹಣಕ್ಕೂ ಕೊರತೆ ಉಂಟಾಗಲಿಲ್ಲ.

ಹೀಗೆ ಹಲವು ವರ್ಷಗಳಿಂದ ದುಡಿದ ಆಸ್ತಿಯನ್ನು ಮಾರಿ, ಅದೇ ಹಣದಲ್ಲಿ ಸಿದ್ಧಲಿಂಗೇಶ್ವರನಿಗೆ 19 ಕೆ.ಜಿ. ತೂಕದ, 10 ಕೋಟಿ ರೂಪಾಯಿ ಮೌಲ್ಯದ ಚಿನ್ನದ ರಥವನ್ನು ಅರ್ಪಿಸಿದ್ದಾರೆ. ನನ್ನ ಎಲ್ಲ ಯಶಸ್ಸು, ಗಳಿಸಿದ ಹಣ, ಆಸ್ತಿಗೂ ಯಡಿಯೂರು ಸ್ವಾಮಿಯೇ ಕಾರಣ ಎಂದು ಹೇಳಿದ ಅವರು, ನಿನ್ನೆ ರಾತ್ರಿ ತಮ್ಮ ಮಕ್ಕಳು, ಪತ್ನಿಯೊಂದಿಗೆ ಆಗಮಿಸಿದ ಚಿನ್ನದ ರಥ ನೀಡಿದ್ದಾರೆ. ದೇವಸ್ಥಾನದಲ್ಲಿ ಅದನ್ನು ಪೂಜೆ ಮಾಡಿ ಸ್ವೀಕರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net