ಗೋವಾ ತುಳುಕೂಟಕ್ಕೆ ಗಣೇಶ್ ಶೆಟ್ಟಿ ಅಧ್ಯಕ್ಷ

tulu
ಗಣೇಶ್ ಶೆಟ್ಟಿ ಇರ್ವತ್ತೂರು
Published on

ಕಾರ್ಕಳ: ಗೋವಾದಲ್ಲಿ ತುಳು ಕೂಟ ಸ್ಥಾಪಕಾಧ್ಯಕ್ಷರಾಗಿ ಉದ್ಯಮಿ, ಕಾರ್ಕಳ ಇರ್ವತ್ತೂರಿನ ಗಣೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಪಣಜಿಯಲ್ಲಿ ಮಂಗಳವಾರ ಸಭೆ ನಡೆದಿದ್ದು, ಈ ಸಂದರ್ಭ ಸರ್ವಾನುಮತದಿಂದ ಅವರನ್ನು ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಚಂದ್ರಹಾಸ ಅಮೀನ್ ಬಂಟ್ವಾಳ, ಉಪಾಧ್ಯಕ್ಷ ಶಶಿಧರ ರೈ ಪುತ್ತೂರು, ಪ್ರಕಾಶ್ ಪೂಜಾರಿ ಮಡಿಕೇರಿ, ವಿಜಯ್ ಶೆಟ್ಟಿ ನಿಟ್ಟೆ, ನಾಗೇಶ್ ಪೂಜಾರಿ ಪಣಿಯೂರು, ಕಾರ್ಯದರ್ಶಿ ಶಶಿಧರ ನಾಯ್ಕ ಬಜಪೆ, ಕೋಶಾಧಿಕಾರಿ ಸಿಎ ಪ್ರಶಾಂತ್ ಜೈನ್ ಇರ್ವತ್ತೂರು, ಜತೆ ಕಾರ್ಯದರ್ಶಿ ಶ್ರೀಕಾಂತ್ ಅಮೀನ್, ಜತೆ ಕೋಶಾಧಿಕಾರಿ ಅಪ್ಪಾಜಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಗೋವಾದಲ್ಲಿ ಅಂದಾಜು 2 ಸಾವಿರ ತುಳುವರು ಉದ್ಯಮ, ಉದ್ಯೋಗದಲ್ಲಿದ್ದು, ಇವರೆಲ್ಲರನ್ನೂ ಒಟ್ಟು ಸೇರಿಸುವ ನಿಟ್ಟಿನಲ್ಲಿ ತುಳುಕೂಟ ರಚನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net