ಜೀವನೋತ್ಸಾಹ ಗುರಿ ತಲುಪುವ ಮಾರ್ಗ

orientation
ನಾಡಾ ಐಟಿಐ ಕಾಲೇಜಿನಲ್ಲಿ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ರಾಬರ್ಟ್ ಜಡ್ ಎಂ.ಡಿಸೋಜ ಸೊಸೈಟಿ ಕಾರ್ಯದರ್ಶಿ ನವೀನ್ ಲೋಬೊ ಮಾತನಾಡಿದರು
Published on

ಕುಂದಾಪುರ: ಜೀವನದಲ್ಲಿ ಅಪಘಾತ ಹಾಗೂ ಆಘಾತ ಸಹಜ. ಆದರೆ ಈ ರೀತಿಯ ದುರ್ಘಟನೆ ಅಥವಾ ಸನ್ನಿವೇಶ ನಿರ್ಮಾಣವಾದಾಗ, ಜೀವನೋತ್ಸಾಹ ಕಳೆದುಕೊಳ್ಳದೆ ಮುಂದಿನ ಜೀವನದ ಗುರಿ ತಲುಪುವ ನಿರ್ಧಾರಗಳೇ ಇತರರಿಗೆ ಮಾದರಿ. ಅಂತಾರಾಷ್ಟ್ರೀಯ ಖ್ಯಾತಿ ಪಡೆದ ನಟ ಕ್ರಿಸ್ಟೋಫರ್ ಅವರ ಜೀವನಗಾಥೆ ಇದಕ್ಕೆ ನಿದರ್ಶನ ಎಂದು ರಾಬರ್ಟ್ ಜಡ್ ಎಂ.ಡಿಸೋಜ ಸೊಸೈಟಿ ಕಾರ್ಯದರ್ಶಿ ನವೀನ್ ಲೋಬೊ ಹೇಳಿದರು.
ನಾಡಾ ರಾಬರ್ಟ್ ಜಡ್ ಎಂ.ಡಿಸೋಜ ಸ್ಮಾರಕ ಐಟಿಐ ಕಾಲೇಜಿನ 2024ನೇ ಸಾಲಿನ ಪ್ರವೇಶಾರ್ಥಿಗಳು ಹಾಗೂ ಪಾಲಕರಿಗೆ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೊಸೈಟಿ ಅಧ್ಯಕ್ಷ ಕಿರಣ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಮನೋಹರ್ ಆರ್.ಕಾಮತ್, ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿ ರಾಜೇಶ್ ಕೆ.ಸಿ. ಮಾತನಾಡಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಯೋಗೀಶ್ ಬಂಕೇಶ್ವರ, ಮೋಹನ್‌ಚಂದ್ರ ಪಿ.ನಾಯಕ್, ಪ್ರೇಮರಾಜ್ ಶೆಟ್ಟಿ, ಡೆಬ್ರಿಯಲ್ ಪಿ.ಫರ್ನಾಂಡಿಸ್, ಶ್ರೀಕಾಂತ್ ನಾಯಕ್, ಸಿಬ್ಬಂದಿ ಶಂಕರನಾರಾಯಣ ಭಟ್, ವಿನಾಯಕ ಕಾಮತ್, ಅಂತೋನಿ ಕ್ರಾಸ್ತಾ ಇದ್ದರು. ಕಿರಿಯ ತರಬೇತಿ ಅಧಿಕಾರಿಗಳಾದ ರಾಘವೇಂದ್ರ ಆಚಾರ್ ಸ್ವಾಗತಿಸಿ, ದಿನೇಶ್ ಕೆ.ಬೈಂದೂರು ವಂದಿಸಿದರು, ಕಿಶೋರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net