ಬೀಚ್​ನಲ್ಲಿ ಬೆತ್ತಲೆ ಓಡಾಡಿದ್ದ ಮಿಲಿಂದ್​ ವಿರುದ್ಧವೂ ದಾಖಲಾಯ್ತು ಕೇಸ್​

Milind
Published on

ಪಣಜಿ: ಗೋವಾದ ಬೀಚ್​ನಲ್ಲಿ ಅರೆನಗ್ನ ನೃತ್ಯ ಮಾಡಿದ ಹಿನ್ನೆಲೆಯಲ್ಲಿ ಮಾಡೆಲ್​ ಪೂನಂ ಪಾಂಡೆ ವಿರುದ್ಧ ಇತ್ತೀಚೆಗಷ್ಟೇ ದೂರು ದಾಖಲಾಗಿ, ಬಳಿಕ ಜಾಮೀನನ ಮೇಲೆ ಬಿಡುಗಡೆ ಆಗಿದ್ದರು. ಬಳಿಕ ಬೀಚ್​ನಲ್ಲಿ ಬೆತ್ತಲೆ ಓಡಾಡಿ ಜನ್ಮದಿನ ಆಚರಿಸಿಕೊಂಡಿದ್ದ ಮಿಲಿಂದ್​ ಸೋಮನ್​ಗೂ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದರು. ಇದೀಗ ಅದರಂತೆ ಮಿಲಿಂದ್​ ವಿರುದ್ಧವೂ ದೂರು ದಾಖಲಾಗಿದೆ.

ಹೌದು, ಪೂನಂಗೆ ಒಂದು ನ್ಯಾಯ, ಮಿಲಿಂದ್​ಗೆ ಬಂದು ನ್ಯಾಯವಾ.. ಮಿಲಿಂದ್​ ಮೇಲೂ ಕೇಸ್​ ದಾಖಲಿಸಿ ಎಂದು ಸಾಕಷ್ಟು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಗೋವಾದ ಸುರಕ್ಷಾ ಮಂಚ್​ ಈ ಸಂಬಂಧ ದೂರು ನೀಡಿತ್ತು. ದೂರು ಪರಿಗಣಿಸಿ ಮಿಲಿಂದ್ ಸೋಮನ್​ ವಿರುದ್ಧ ಐಪಿಸಿ ಸೆಕ್ಷನ್​ 294 ಮತ್ತು 67ರ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ ಪ್ರದರ್ಶನ ಮಾಡಿದ್ದಾರೆಂದು ಎಫ್​ಐಆರ್ ದಾಖಲಿಸಿದೆ.

55ನೇ ಜನ್ಮದಿನದ ಹಿನ್ನೆಲೆಯಲ್ಲಿ ಗೋವಾದ ಬೀಚ್​ನಲ್ಲಿ ಬೆತ್ತಲೆಯಾಗಿ ಓಡಾಡಿದ ಫೋಟೋವನ್ನು ಮಿಲಿಂದ್​ ಶೇರ್​ ಮಾಡಿದ್ದರು. ಆ ಫೋಟೋಕ್ಕೆ ಪತ್ನಿ ಫೋಟೋ ಕ್ರೆಡಿಟ್ ಎಂದೂ ಬರೆದುಕೊಂಡಿದ್ದರು. ಇದೀಗ ಇಬ್ಬರಿಗೂ ಸಂಕಷ್ಟ ಎದುರಾಗಿದೆ. ಮುಜುಗರಕ್ಕೀಡು ಮಾಡುವ ಫೋಟೋ ಶೇರ್​ ಮಾಡಿಕೊಂಡು ನೆಟ್ಟಿಗರಿಂದ ಅಪಮಾನಕ್ಕೀಡಾಗುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net