More

    PHOTOS| ಭಾರತೀಯ ಸಂಪ್ರದಾಯದಂತೆ ವಿನಿ-ಮ್ಯಾಕ್ಸಿ ನಿಶ್ಚಿತಾರ್ಥ: ದೇಶಿ ಉಡುಗೆಯಲ್ಲಿ ಭಾವಿ ಪತ್ನಿ ಜತೆ ಮ್ಯಾಕ್ಸಿ ಮಿಂಚಿಂಗ್​!

    ನವದೆಹಲಿ: ಕಳೆದ ಫೆಬ್ರವರಿ ತಿಂಗಳ ಕೊನೆಯಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾದ ಆಲ್​ರೌಂಡರ್​ ಆಟಗಾರ ಗ್ಲೇನ್​ ಮ್ಯಾಕ್ಸ್​ವೆಲ್​, ಭಾರತೀಯ ಮೂಲದ ಗರ್ಲ್​ಫ್ರೆಂಡ್​ ವಿನಿ ರಾಮನ್​ರೊಂದಿಗೆ ಎಂಗೇಜ್​ಮೆಂಟ್​ ಮಾಡಿಕೊಂಡಿರುವ ವಿಚಾರವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಖಚಿತಪಡಿಸಿದ್ದರು. ಇದೀಗ ಭಾರತೀಯ ಸಂಪ್ರದಾಯದಂತೆ ಇಬ್ಬರು ನಿಶ್ಚಿತಾರ್ಥ ನೇರವೇರಿಸಿಕೊಂಡಿದ್ದಾರೆ.

    ಮ್ಯಾಕ್ಸ್​ವೆಲ್​ ಭಾವಿ ಪತ್ನಿ ಭಾರತೀಯ ಮೂಲದ ವಿನಿ ರಾಮನ್​ ಇನ್​​ಸ್ಟಾಗ್ರಾಂನಲ್ಲಿ ಶನಿವಾರ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.​ ಆ ಕುರಿತು ಕಳೆದ ರಾತ್ರಿಯಷ್ಟೇ ನಾವು ಭಾರತೀಯ ನಿಶ್ಚಿತಾರ್ಥವನ್ನು ಆಚರಿಸಿಕೊಂಡೆವು. ಹಾಗೇ ಮದುವೆ ಹೇಗಿರಲಿದೆ ಎಂಬ ಸಣ್ಣ ಟೀಸರ್​ ಝಲಕ್ ಅನ್ನು ಮ್ಯಾಕ್ಸಿಗೆ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ವಿನಿ ಶೇರ್​ ಮಾಡಿರುವ ಫೋಟೋದಲ್ಲಿ ಮ್ಯಾಕ್ಸಿ ಕಡು ಹಸಿರಿನ ಕುರ್ತಾ ಧರಿಸಿದ್ದರೆ, ವಿನಿ, ನೀಲಿ ಬಣ್ಣದ ಚಿನ್ನದ ಬಣ್ಣ ಮಿಶ್ರಿತ ಲೆಹಾಂಗ್​ ತೊಟ್ಟು ಕಂಗೊಳಿಸಿದ್ದಾರೆ. ವಿದೇಶದಲ್ಲಿದ್ದರೂ ಭಾರತೀಯ ಸಂಪ್ರದಾಯವನ್ನು ನೆಚ್ಚಿಕೊಂಡಿರುವ ವಿನಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಭಾರತವನ್ನು ಗೌರವಿಸುವ ಮ್ಯಾಕ್ಸಿಗೂ ಭಾರತೀಯರು ಫಿದಾ ಆಗಿದ್ದಾರೆ.

    ಮೆಲ್ಬೋರ್ನ್​ನ ಒಳ ಉಪನಗರ ತೋರಕ್​ನಲ್ಲಿ ಮ್ಯಾಕ್ಸಿ ಮತ್ತು ವಿನಿ ನಿಶ್ಚಿತಾರ್ಥ ಎರಡು ಕುಟುಂಬದವರ ಸಮ್ಮುಖದಲ್ಲಿ ನಡೆದಿದೆ. ಸಮಾರಂಭಕ್ಕೆ ಆಗಮಿಸಿದ ಸ್ನೇಹಬಳಗಕ್ಕೂ ವಿನಿ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಫೆಬ್ರವರಿ ತಿಂಗಳಾಂತ್ಯದಲ್ಲಿ ತಮ್ಮ ಭಾವಿ ಪತ್ನಿಯೊಂದಿಗಿನ ಫೋಟೋವನ್ನು ಮ್ಯಾಕ್ಸ್​ವೆಲ್ ಇನ್​ಸ್ಟಾಗ್ರಾಂನಲ್ಲಿ ರಿಂಗ್​ ಎಮೋಜಿಯೊಂದಿಗೆ ಪೋಸ್ಟ್​ ಮಾಡಿದ್ದರು. ಫೋಟೋದಲ್ಲಿ ವಿನಿ ರಾಮನ್​ ಮ್ಯಾಕ್ಸ್​ವೆಲ್​ ತೊಡಿಸಿರುವ ರಿಂಗ್​ ಅನ್ನು ಪ್ರದರ್ಶಿಸಿದ್ದರು.

    ವಿನಿ ರಾಮನ್​ ಕೂಡ ತಮ್ಮ ಇನ್​ಸ್ಟಾಗ್ರಾಂನಲ್ಲಿ ಅದೇ ಫೋಟೋವನ್ನು ಪೋಸ್ಟ್​ ಮಾಡಿಕೊಂಡಿದ್ದರು. ಕಳೆದ ವಾರ ನನ್ನ ನೆಚ್ಚಿನ ವ್ಯಕ್ತಿ ನನ್ನೊಂದಿಗೆ ಮದುವೆಯಾಗುತ್ತೀಯಾ ಎಂದು ಕೇಳಿದರು. ನಾನು ಒಪ್ಪಿಗೆ ಸೂಚಿಸಿದೆ ಎಂದು ಅಡಿಬರಹ ಬರೆದುಕೊಂಡಿದ್ದರು. ಅಲ್ಲಿಗೆ ಮ್ಯಾಕ್ಸ್​ವೆಲ್​ ಎಂಗೇಜ್​ ಆಗಿರುವುದು ಖಚಿತವಾಗಿತ್ತು. (ಏಜೆನ್ಸೀಸ್​)

    ಭಾರತೀಯ ಮೂಲದ ಗರ್ಲ್​ಫ್ರೆಂಡ್​ನೊಂದಿಗೆ ಆಸಿಸ್​ ಆಲ್​ರೌಂಡರ್​ ಮ್ಯಾಕ್ಸಿ ಎಂಗೇಜ್ಡ್! ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts